ಪ್ರಗತಿವಾಹಿನಿ ಸುದ್ದಿ: ಜೂನ್ 5ರಂದು ಭೂಮಿಯಿಂದ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದ ಭಾರತೀಯ ಮೂಲದ ಖಗೋಳ ವಿಜ್ಞಾನಿ ಸುನೀತಾ ವಿಲಿಯಮ್ಸ್ ಬಾಹ್ಯಾಕಾಶದಲ್ಲಿಯೇ ಕಳೆದು ಹೋಗಲಿದ್ದಾರೆಯೇ ಎಂಬ ಆತಂಕ ಎದುರಾಗಿದೆ.
ನಾಸಾ ನೀಡಿರುವ ಮಾಹಿತಿ ಪ್ರಕಾರ ಬಾಹ್ಯಾಕಾಶ ನಿಲ್ದಾಣದಲ್ಲಿ ಸಮಸ್ಯೆಯಾಗಿದ್ದು, ಸುನಿತಾ ವಿಲಿಯಮ್ಸ್ ಹಿಂದಿರುಗಲು ವಿಳಂಬವಾಗಲಿದೆ ಎಂದು ತಿಳಿಸಿದೆ. ಸುನಿತಾ ವಿಲಿಯಮ್ಸ್ ಭೂಮಿಗೆ ಮರಳಿ ಬಾರದ ಸ್ಥಿತಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನಲಾಗುತ್ತಿದೆ.
ಐಎಸ್ ಎಸ್ (ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ) ನಿಂದ ಭೂಮಿಗೆ ವಾಪಾಸ್ ಆಗಬೇಕಿದ್ದ ಅವರ ವಾಹನದಲ್ಲಿ ಹಲವು ತಾಂತ್ರಿಕ ದೋಷ ಕಂಡುಬಂದಿದೆ.ಇಷ್ಟೊತ್ತಿಗಾಗಲೇ ಸುನಿತಾ ಭೂಮಿಗೆ ವಾಪಾಸ್ ಆಗಬೇಕಿತ್ತು. ಆದರೆ ತಾಂತ್ರಿಕ ದೋಷದಿಂದಾಗಿ ಅವರು ಹಿಂದಿರುಗುವುದು ವಿಳಂಬವಾಗುತ್ತಿದೆ.
ಭಾರತ ಮೂಲದ ಕಲ್ಪನಾ ಚಾವ್ಲಾ (2003) ಅವರಂತೆಯೇ ಸುನಿತಾ ವಿಲಿಯಮ್ಸ್ ಕೂಡ ಭೂಮಿಗೆ ಮರಳಲಾಗದ ಸ್ಥಿತಿ ಎದುರಾಗಲಿದೆಯೇ ಎಂಬ ಆತಂಕ ಎದುರಾಗಿದೆ. ಭಾರತೀಯ ಮೂಲದ ಸುನಿತಾ ವಿಲಿಯಮ್ಸ್ ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಗೆ ಶೀಘ್ರವಾಗಿ ಸುರಕ್ಷಿತವಾಗಿ ಮರಳಲಿ ಎಂದು ಕೋಟ್ಯಂತರ ಭಾರತಿಯರು ಪ್ರಾರ್ಥಿಸುತ್ತಿದ್ದಾರೆ. ಈ ನಡುವೆ #Sunitawilliams ಗಾಗಿ ಕೋಟ್ಯಂತರ ಜನರು ಗೂಗಲ್ ನಲ್ಲಿ ಸರ್ಚ್ ಮಾಡಿದ್ದು, ಟ್ರೆಂಡ್ ಆಗಿದೆ. ಗೂಗಲ್ ಸರ್ಚ್ ಇಂಜಿನ್ ನಲ್ಲಿ ಸುನಿತಾ ವಿಲಿಯಮ್ಸ್ ಬಗ್ಗೆ ದೇಶಾದ್ಯಂತ ಜನರು ಸರ್ಚ್ ಮಾಡುತ್ತಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ