Latest

ಸೂಪರ್ ಸ್ಟಾರ್ ಸಿನಿಮಾ ನಿರ್ದೇಶಕನ ವಿರುದ್ಧ FIR ದಾಖಲು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಸಹೋದರನ ಮಗ ನಿರಂಜನ್ ಸುಧೀಂದ್ರ ಅಭಿನಯದ ಸೂಪರ್ ಸ್ಟಾರ್ ಸಿನಿಮಾ ನಿರ್ದೇಶಕರ ವಿರುಇದ್ಧ ನಿರ್ಮಾಪಕರು ಪ್ರಕರಣ ದಾಖಲಿಸಿದ್ದಾರೆ.

ನಿರ್ದೇಶಕ ಆರ್.ವೆಂಕಟೇಶ್ ಬಾಬು ವಿರುದ್ಧ ನಿರ್ಮಾಪಕ ಮೈಲಾರಿ ವಂಚನೆ ಆರೋಪ ಮಾಡಿದ್ದು, 1 ಕೋಟಿ 10 ಲಕ್ಷ ರೂಪಾಯಿ ಮೋಸ ಮಾಡಿದ್ದಾರೆ ಎಂದು ಬೆಂಗಳೂರಿನ ಹೆಣ್ಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಸೂಪರ್ ಸ್ಟಾರ್ ಸಿನಿಮಾ ನಿರ್ದೇಶಕ ವೆಂಕಟೇಶ್ ಬಾಬು ಸಿನಿಮಾ ಚೆನ್ನಾಗಿ ಓಡಲಿದೆ ಎಂದು ಪ್ರಚೋದಿಸಿ ತಮ್ಮಿಂದ ಕೋಟ್ಯಂತರ ರೂಪಾಯಿ ಹಣ ಪಡೆದಿದ್ದಾರೆ. ಈಗ ಸಿನಿಮಾ ಬಿಡುಗಡೆಗೂ ಮುನ್ನ ಮಾಹಿತಿ ನೀಡದೇ ಬೇರೆಯವರಿಗೆ ಮಾರಾಟ ಮಾಡಿದ್ದಾರೆ. ಅಲ್ಲದೇ ಕಲಾವಿದರಿಗೂ ಹಣ ನೀಡದೇ ತಮ್ಮ ಸ್ವಂತಕ್ಕಾಗಿ ಉಪಯೋಗಿಸಿಕೊಂಡಿದ್ದಾರೆ ಎಂದು ದೂರಿದ್ದಾರೆ.

ಸೂಪರ್ ಸ್ಟಾರ್ ಚಿತ್ರಕ್ಕೆ ಮೊದಲು ಮೈಲಾರಿ ಎಂಬುವವರು ನಿರ್ಮಾಪಕರಾಗಿದ್ದರು. ನಂತರದಲ್ಲಿ ಚಿತ್ರತಂಡದಲ್ಲಿ ಬದಲಾವಣೆಗಳು ಆಗಿ ಸತ್ಯನಾರಾಯಣ ಹಾಗೂ ರಮಾದೇವಿ ಎಂಬುವವರು ನಿರ್ಮಾಪಕರಾಗಿದ್ದರು. ಇದೀಗ ನಿರ್ದೇಶ ಆರ್ ವೆಂಕಟೇಶ್ ಬಾಬು, ಸತ್ಯನಾರಾಯಣ ಹಾಗೂ ರಮಾದೇವಿ ಸೇರಿ ಮೂವರ ವಿರುದ್ಧ ನಿರ್ಮಾಪಕ ಮೈಲಾರಿ ವಂಚನೆ ಪ್ರಕರಣ ದಾಖಲಿಸಿದ್ದಾರೆ.

Home add -Advt

ರಸ್ತೆ ಗುಂಡಿ ತಪ್ಪಿಸಲು ಹೋಗಿ ಭೀಕರ ಅಪಘಾತ; ನಿವೃತ್ತ ಯೋಧ ದಾರುಣ ಸಾವು

https://pragati.taskdun.com/latest/mandyasoldierdeathroad-pothole/

Related Articles

Back to top button