ಪ್ರಗತಿ ವಾಹಿನಿ ಸುದ್ದಿ, ಶಿರಸಿ: ಅರಣ್ಯ ವಾಸಿಗಳ ಹಕ್ಕಿನ ಬಗ್ಗೆ ಸಪ್ರಿಂ ಕೋರ್ಟಿನಲ್ಲಿ ಈಗಾಗಲೇ ಅಪಾಡವಿಟ್ ಸಲ್ಲಿಸಲಾಗಿದೆ. ಇನ್ನೊಂದು ಅಪಾಡವಿಟ್ ಸಲ್ಲಿಸುತ್ತೇವೆ. ನಮ್ಮ ಸರಕಾರ ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸುವ ಕೆಲಸ ಮಾಡುವುದಿಲ್ಲ.
ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ಕೊಟ್ಟಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಶಿರಸಿಯಲ್ಲಿ ಹಮ್ಮಿಕೊಂಡಿರುವ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಕಾರವಾರದಲ್ಲಿ ಈಗಾಗಲೇ ಇರುವ ಮೆಡಿಕಲ್ ಕಾಲೇಜಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಅಗತ್ಯ ವ್ಯವಸ್ಥೆ ಮಾಡಲಾಗುತ್ತದೆ. ಅಲ್ಲದೇ ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡಲಾಗುವುದು, ನಾವೇ ಬಂದು ಅಡಿಗಲ್ಲಿಡುತ್ತೇವೆ ಎಂದು ಭರವಸೆ ನೀಡಿದರು.
ಶಿರಸಿಯಲ್ಲಿ ಅರಣ್ಯ ಮತ್ತು ತೋಟಗಾರಿಕೆ ಕಾಲೇಜಿದೆ. ಇವೆರಡೂ ಸಂಪನ್ಮೂಲಗಳನ್ನು ಬಳಕೆ ಮಾಡಿ ಪರಿಸರ ವಿಶ್ವ ವಿದ್ಯಾಲಯದ ಮಾಡುತ್ತೇವೆ. ಇದು ರಾಜ್ಯದಲ್ಲೇ ಮೊದಲ ಪರಿಸರ ವಿಶ್ವ ವಿದ್ಯಾಲಯ ಆಗಲಿದೆ. ಗ್ರೀನ್ ಬಜೆಟ್ ಸಲುವಾಗಿ 100 ಕೋಟಿ ರೂ. ಅನುದಾನ ಕೊಟ್ಟು ಕೆಲಸ ನಡೆಯುತ್ತಿದೆ.
ಸಂಪೂರ್ಣವಾಗಿ ಪರಿಸರದ ಅಧ್ಯಯನ ಆಗಬೇಕು. ಗ್ರೀನ್ ಕವರ್ ಹೆಚ್ಚು ಮಾಡಬೇಕು. ಜನರಿಗೆ ಆದಾಯವೂ ಹೆಚ್ಚಬೇಕು, ಪರಿಸರ ಸಂರಕ್ಷಣೆಯೂ ಆಗಬೇಕು,
ಈ ಎಲ್ಲ ವಿಷಯಗಳಿಗೂ ಉತ್ತರ ನೀಡುವ ನಿಟ್ಟಿನಲ್ಲಿ ಪರಿಸರ ವಿಶ್ವ ವಿದ್ಯಾಲಯ ಆಗಬೇಕು. ಬಜೆಟ್‍ನಲ್ಲಿ ಇದಕ್ಕೆ ಅಗತ್ಯ ಅನುದಾನ ನೀಡಲಾಗುವುದು ಎಂದರು.ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವರಾದ ಶಿವರಾಮ ಹೆಬ್ಬಾರ, ಸಿಸಿ ಪಾಟೀಲ, ಆರ್. ವಿ. ದೇಶಪಾಂಡೆ ಮೊದಲಾದವರು ಇದ್ದರು.
ಶಿರಸಿ ಪ್ರತ್ಯೇಕ ಜಿಲ್ಲೆ ರಚನೆ: ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದೇನು ?
https://pragati.taskdun.com/environment-university-establish-in-sirsi-cm-bommayi/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ