Kannada NewsKarnataka NewsLatest

ಬಿಜೆಪಿ ಜಿಲ್ಲಾಧ್ಯಕ್ಷರನ್ನು ಹಣ್ಣುಗಾಯಿ ನೀರುಗಾಯಿ ಮಾಡಿದ ಲಕ್ಷ್ಮಣ ಸವದಿ ಬೆಂಬಲಿಗರು

ಪ್ರಗತಿವಾಹಿನಿ ಸುದ್ದಿ, ಅಥಣಿ: ಟಿಕೆಟ್ ಲಭಿಸದೆ ಅಸಮಾಧಾನಕ್ಕೆ ಒಳಗಾಗಿರುವ ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಅವರ ಅಸಮಾಧಾನ ಶಮನಗೊಳಿಸಲು ಆಗಮಿಸಿದ್ದ ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜೇಶ ನೇರಲಿ ಅವರನ್ನು ಸವದಿ ಬೆಂಬಲಿಗರು ಹಣ್ಣುಗಾಯಿ ನೀರುಗಾಯಿ ಮಾಡಿದ್ದಾರೆ.

ಬಹಿರಂಗ ಅಸಮಾಧಾನ ವ್ಯಕ್ತಪಡಿಸಿ ಪಕ್ಷಕ್ಕೆ ರಾಜೀನಾಮೆ ನೀಡಿರುವ ಲಕ್ಷ್ಮಣ ಸವದಿ ಅವರ ಸಮ್ಮುಖದಲ್ಲೇ ಈ ಬೆಳವಣಿಗೆ ನಡೆಯಿತು. ಸವದಿ ಅವರಿಗೆ ಟಿಕೆಟ್ ನೀಡದಿರುವುದಕ್ಕೆ ತೀವ್ರ ವಾಗ್ದಾಳಿ ನಡೆಸಿದ ಬೆಂಬಲಿಗರು “ನೀವಿಲ್ಲಿ ಬರಲೇಬಾರದಿತ್ತು..” ಎಂದು ಕಿಡಿ ಕಾರಿದ್ದಲ್ಲದೆ ಮಹೇಶ ಕುಮಠಳ್ಳಿ ಅವರಿಗೆ ಟಿಕೆಟ್ ನೀಡಿದ ಬಗ್ಗೆ ಆಕ್ರೋಶದ ಮಳೆಗೈದರು.

Home add -Advt

ಈ ಮಧ್ಯೆ ಸವದಿ ಅವರು ಬೆಂಬಲಿಗರನ್ನು ಸಮಾಧಾನಪಡಿಸಲು ಯತ್ನಿಸಿದರೂ ಬೆಂಬಲಿಗರ ಕೋಪಾಗ್ನಿ ಶಮನವಾಗಲಿಲ್ಲ. ರಾಜೇಶ ನೇರಲಿ ಮಾತ್ರ ಸ್ತಂಭೀಭೂತರಾಗಿ ನಿಂತಿದ್ದರು. ಕೊನೆಗೆ ಲಕ್ಷ್ಮಣ ಸವದಿ ಅವರ ಪುತ್ರ ಚಿದಾನಂದ ಸವದಿ ಮಧ್ಯ ಪ್ರವೇಶಿಸಿ ಬೆಂಬಲಿಗರನ್ನು ಶಾಂತಗೊಳಿಸಿದ ನಂತರ ಬಗೆಹರಿಯದ ತೀರ್ಮಾನದೊಂದಿಗೆ ರಾಜೇಶ ನೇರಲಿ ಅಲ್ಲಿಂದ ನಿರ್ಗಮಿಸಿದರು.

https://pragati.taskdun.com/contesting-as-a-non-party-candidate-astagi/
https://pragati.taskdun.com/mudigere-mla-mp-kumaraswamy-quits-bjp/

https://pragati.taskdun.com/i-will-expose-the-bommai-scam-bjp-mla-nehru-olekar-lashed-out-singularly/

Related Articles

Back to top button