Latest

*ರಾಜ್ಯ ಸರ್ಕಾರಕ್ಕೆ ಶಾಕ್; ಮುಸ್ಲಿಂ ಮೀಸಲಾತಿ ರದ್ದು ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮುಸ್ಲಿಂ ಸಮುದಾಯಕ್ಕೆ ನೀಡಲಾಗಿದ್ದ 2ಬಿ ಮೀಸಲಾತಿ ಆದೇಶ ರದ್ದು ಮಾಡಿದ್ದ ರಾಜ್ಯ ಸರ್ಕಾರದ ಕ್ರಮಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.

ಮುಸ್ಲಿಂ 2ಬಿ ಮೀಸಲಾತಿ ರದ್ದು ಪಡಿಸಿ ಒಕ್ಕಲಿಗ ಹಾಗೂ ಲಿಂಗಾಯಿತ ಸಮುದಾಯಕ್ಕೆ ಮೀಸಲಾತಿ ಆದೇಶ ಹೊರಡಿಸಿದ್ದ ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರದ ಆದೇಶ ದೋಷಪೂರಿತದಂತೆ ಕಂಡು ಬರುತ್ತಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾಗಿದೆ.

ಏ.13ರಂದು ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ನೇತೃತ್ವದ ಪೀಠ, ರಾಜ್ಯ ಸರ್ಕಾರದ ಮೀಸಲಾತಿ ಪರಿಷ್ಕರಣೆ ದೋಷಪೂರಿತವಾಗಿದೆ. ಮುಸ್ಲಿಂರಿಗೆ ನೀಡಿದ್ದ ಶೇ.4ರಷ್ಟು ಮೀಸಲಾತಿ ರದ್ದು ಮೇಲ್ನೋಟಕ್ಕೆ ಸೂಕ್ತವಾದಂತೆ ಇಲ್ಲ, ಅಲ್ಲದೇ ಒಕ್ಕಲಿಗ , ಲಿಂಗಾಯಿತ ಮೀಸಲಾತಿ ಹೆಚ್ಚಳ ಕೂಡ ದೋಷಪೂರಿತವಾಗಿದೆ. ಮುಂದಿನ ವಿಚಾರಣೆವರೆಗೆ ಮೀಸಲಾತಿ ರದ್ದು ಆಧಾರದ ಮೇಲೆ ಯಾವುದೇ ದಾಖಲಾತಿ, ನೇಮಕಾತಿ ಮಾಡಬಾರದು ಎಂದು ಆದೇಶ ನೀಡಿತು.

ಇಂದು ನಡೆದ ಅರ್ಜಿ ವಿಚಾರಣೆಯಲ್ಲಿಯೂ ಸುಪ್ರೀಂ ಕೋರ್ಟ್ ತನ್ನ ಹಿಂದಿನ ಆದೇಶವನ್ನು ಮುಂದುವರೆಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದು, ಮುಸ್ಲಿಂ ಮೀಸಲಾತಿ ರದ್ದು ಆದೇಶಕ್ಕೆ ತಡೆ ಮುಂದುವರೆಸಿದೆ. ಮುಂದಿನ ವಿಚಾರಣೆ ಮೇ 9ರಂದು ನಡೆಸಲಾಗುವುದು ಎಂದು ತಿಳಿಸಿದೆ.

https://pragati.taskdun.com/mallikarjuna-khargepressmeetmangalore/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button