Latest
*ಪರಪ್ಪನ ಅಗ್ರಹಾರ ಜೈಲು ಸೇರಿದ ಎಂಎಲ್ ಸಿ ಸೂರಜ್ ರೇವಣ್ಣ: ವಿಚಾರಣಾಧೀನ ಕೈದಿ ನಂಬರ್ ವಿತರಿಸಿದ ಜೈಲಧಿಕಾರಿಗಳು*
ಪ್ರಗತಿವಾಹಿನಿ ಸುದ್ದಿ: ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ಈಗ ವಿಚಾರಣಾಧೀನ ಕೈದಿ.
ಯುವಕನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಲ್ಲಿ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಹಾಸನದ ಸಿಇಎನ್ ಠಾಣೆ ಪೊಲೀಸರು ಸೂರಜ್ ರೇವಣ್ಣನನ್ನು ಬಂಧಿಸಿದ್ದರು.
ಸೂರಜ್ ರೇವಣ್ಣಗೆ ಕೋರ್ಟ್ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ. ಈ ಹಿನ್ನೆಲೆಯಲ್ಲಿ ಸೂರಜ್ ರೇವಣ್ಣ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಜೈಲಿನ ಕ್ವಾರಂಟೈನ್ ಸೆಲ್ ನಲ್ಲಿ ಸೂರಜ್ ರೇವಣ್ಣನನ್ನು ಇರಿಸಲಾಗಿದ್ದು, ಜೈಲಧಿಕಾರಿಗಳು ಸೂರಜ್ ಗೆ ವಿಚಾರಣಾಧೀನ ಕೈದಿ ನಂಬರ್ 6141 ಸಂಖ್ಯೆ ವಿತರಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ