*ಬಿರುಗಾಳಿ ಮಳೆಗೆ ಧರೆಗುರುಳಿದ ವಿದ್ಯುತ್ ಕಂಬ; ಶಾಲಾ ಕಟ್ಟಡಕ್ಕೆ ಹಾನಿ: ತಾಲೂಕಾಧಿಕಾರಿಗಳ ಭೇಟಿ, ಪರಿಶೀಲನೆ*

ಪ್ರಗತಿವಾಹಿನಿ ಸುದ್ದಿ: ಗುರುವಾರ ಸಂಜೆ ಭಾರೀ ಗಾಳಿ, ಮಳೆಗೆ ಶಾಲಾ ಮೇಲ್ವಿಚಾರಣೆ, ವಿದ್ಯುತ್ ಕಂಬಗಳು ಧರೆಗುರುಳಿದ ಪರಿಣಾಮ ಭಾರೀ ನಷ್ಟವಾಗಿದೆ.
ರಾಮದುರ್ಗ ತಾಲೂಕಾಧಿಕಾರಿಗಳು ಸಮೀಪದ ಶಿವಪೇಠ ಗ್ರಾಮಕ್ಕೆ ದೌಡಾಯಿಸಿ ಹಾನಿಯಾದ ಶಾಲಾ ಮೇಲ್ವಿಚಾರಣೆಯನ್ನು ಪರಿಶೀಲಿಸಿ ಕ್ರಮ ಕೈಗೊಂಡಿದ್ದಾರೆ.
ರಾಮದುರ್ಗ ಬಿಇಓ ಆರ್.ಟಿ.ಬಳಿಗಾರ ಶುಕ್ರವಾರ ಮುಂಜಾನೆ ಸ್ಥಳಕ್ಕೆ ಆಗಮಿಸಿದ ಅವರು, ನಮ್ಮ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವು ಎಂದು ತಿಳಿಸಿದರು.

ರಾಮದುರ್ಗ ಜಿ.ಪಂನ ಎಇಇ ಎಮ್.ಡಿ.ಇಜಾನಸುಗುರ ಹಾನಿಯಾದ ಶಿವಪೇಠ ಶಾಲಾ ಕಟ್ಟಡವನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಿಸುವುದಾಗಿ ಬರವಸೆ ನೀಡಿದ ಅವರು, ೫೦ ವರ್ಷಗಳ ಹಳೇಯ ಶಾಲಾ ಕಟ್ಟಡಗಳು ದುರಸ್ತಿಯಲ್ಲಿದ್ದು ಅವುಗಳನ್ನು ತೆರವು ಗೊಳಿಸಲು ಪ್ರಸ್ತಾವನೆಗೆ ಕಳುಹಿಸಿ ಹೊಸ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳಲಾಗುತ್ತಿದೆ ಎಂದು ಬರವಸೆ ನೀಡಿದರು.
ಸುರೇಬಾನ ಹೆಸ್ಕಾಂನ ಎಸ್ಓ ಪಮ್ಮಾರ ಧರೆಗುಳಿ, ಹಾನಿಯಾಗಿರುವ ವಿದ್ಯುತ್ ಕಂಬಗಳನ್ನು ತೆರವು ಹೊಳಿಸಿ, ಹೊಸ ಕಂಬಗಳನ್ನು ನೆಡಲು ಪ್ರಾರಂಭಿಸಿದ್ದಾರೆ.
ರಾಮದುರ್ಗ ಜಿ.ಪಂನ ಇವರೊಂದಿಗೆ ಜೆಇ ಪ್ರತಾಪ, ಬಿಆರ್ಸಿ ವಿಠ್ಠಲ ಯಲಿಗೋಡ, ಶಿವಪೇಠ ಸ.ಹಿ.ಪ್ರಾ. ಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯ ಆತ್ಮಾನಂದ ಪಲ್ಲೇದ, ಕೋರಿ ಶಿಕ್ಷಕರು ಇದ್ದರು.
ವರದಿಗೆ ಸ್ಪಂದಿಸಿದ ಅಧಿಕಾರಿಗಳಿಗೆ ಸಾರ್ವಜನಿಕರು ಹಾಗೂ ಶಾಲೆಯ ಎಸ್.ಡಿ.ಎಮ್.ಸಿ ಯವರು ಅಭಿನಂದನೆ ಸಲ್ಲಿಸಿದ್ದಾರೆ.