
ಪ್ರಗತಿವಾಹಿನಿ ಸುದ್ದಿ, ಯಮಕನಮರಡಿ: ” ಜಿಲ್ಲೆಯ ವಿಧಾನ ಪರಿಷತ್ ಗೆ ಇದೇ ಡಿ. 10 ರಂದು ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ್ ಹಟ್ಟಿಹೊಳಿ ಅವರಿಗೆ ಪ್ರಥಮ ಪ್ರಾಶಸ್ತ್ಯ ಮತ ನೀಡಿ, ಬಹು ಅಂತರದಿಂದ ಗೆಲ್ಲಿಸಬೇಕು. ಈ ಗೆಲುವಿನಿಂದ ಕ್ಷೇತ್ರದ ಅಭಿವೃದ್ಧಿಗೆ ಮತ್ತಷ್ಟು ಸಹಕಾರವಾಗಲಿದೆ ಎಂದು ” ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಹೇಳಿದರು.

ಹೆಬ್ಬಾಳ ಜಿಲ್ಲಾ ಪಂಚಾಯತ ಯಾವುದೇ ಸ್ಥಳೀಯ ಚುನಾವಣೆ ಹಾಗೂ ವಿಧಾನಸಭಾ ಚುನಾವಣೆ ನಡೆದರೂ, ನಮ್ಮನ್ನು ಬೆಂಬಲಿಸಿ ಹೆಚ್ಚಿನ ಮತಗಳನ್ನು ನೀಡಿ ಸಹಕಾರ ನೀಡಿದ್ದೀರಿ. ಈ ಚುನಾವಣೆ ನಮಗೆ ಪ್ರತಿಷ್ಠೆಯಾಗಿದೆ. ಹಾಗಾಗಿ ಗ್ರಾಪಂ ಚುನಾಯಿತ ಪ್ರತಿನಿಧಿಗಳ ಮೇಲೆ ಬಾಹಳಷ್ಟು ಜವಾಬ್ದಾರಿ ಇದೆ. ಅದಕ್ಕಾಗಿ ಸದಸ್ಯರು ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದರು.

ಈ ಸಂದರ್ಭದಲ್ಲಿ ಈರಣ್ಣ ಬಿಸಿರೋಟ್ಟಿ, ಪಪ್ಪುಗೌಡ ಪಾಟೀಲ್ , ಕುಶಾಲ್ ಖೋತ, ಮಹಾತೇಂಶ ಮಗದುಮ್ಮ , ಇಲಿಯಾಸ್ ಇನಾಮಾದಾರ್ , ಆನಂದ ತವಗಮಠ, ಸುದೀರ ಗಿರಿಗೌಡರ, ಸುರೇಶ ಹುದ್ದಾರ, ನಿಂಗನಗೌಡ ಪಾಟೀಲ್ , ರಾಜು ಅವಠೆ, ಕಿರಣ ರಜಪೂತ್ ಹಾಗೂ ಇತರರು ಇದ್ದರು.