Kannada NewsKarnataka NewsLatest

*ಸುರೇಶ್ ಕೆ. ಸೇರಿ 32 ಪತ್ರಕರ್ತರಿಗೆ ದತ್ತಿ ಪ್ರಶಸ್ತಿ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ಪ್ರಸಕ್ತ ಸಾಲಿನ ‘ಮಹದೇವ ಪ್ರಕಾಶ್’ ಪ್ರಶಸ್ತಿಗೆ ವಿಜಯ ಕರ್ನಾಟಕದ ಬೆಳಗಾವಿ-ಬಾಗಲಕೋಟೆ ಅವೃತ್ತಿಯ ಸ್ಥಾನಿಕ ಸಂಪಾದಕ ಕೆ. ಸುರೇಶ್ ಸೇರಿದಂತೆ 28 ಮಂದಿಯನ್ನು ನಾನಾ ದತ್ತಿ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ.

Home add -Advt

ಪ್ರತಿಷ್ಠಿತ ‘ದತ್ತಿನಿಧಿ ಪ್ರಶಸ್ತಿ’ಗಳನ್ನು ವೃತ್ತಿ ಸೇವೆ, ಸಾಮಾಜಿಕ ಬದ್ಧತೆ ಹಾಗೂ ಮಾಧ್ಯಮ ರಂಗದ ಸಾಧನೆಗಳನ್ನು ಪರಿಗಣಿಸಿ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿರುವ ಪತ್ರಕರ್ತರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 5 ಸಾವಿರ ರೂ. ನಗದು ಬಹುಮಾನ, ಪ್ರಶಸ್ತಿ ಫಲಕ ಒಳಗೊಂಡಿದೆ. ಚಿಕ್ಕಮಗಳೂರಿನಲ್ಲಿ ಜು. 25ರಂದು ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುರೇಶ್ ಪರಿಚಯ :
ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಮೂಲದವರಾದ ಸುರೇಶ್ ಅವರು ಬೆಳಗಾವಿಯ ಜೊತೆಗೆ ಬಾಗಲಕೋಟೆ ವಿಜಯ ಕರ್ನಾಟಕ ಸ್ಥಾನಿಕ ಸಂಪಾದಕರಾಗಿ ಹೆಚ್ಚುವರಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಈ ಮೊದಲು ವಿಜಯವಾಣಿ, ಉದಯವಾಣಿ, ರೂಪತಾರಾ, ಹೊಸದಿಗಂತ ಪತ್ರಿಕೆಗಳಲ್ಲಿ ಉಪಸಂಪಾದಕರಾಗಿ ಸುಮಾರು ಎರಡು ದಶಕಗಳಿಗೂ ಅಧಿಕ ಕಾಲ ಸೇವೆ ಸಲ್ಲಿಸಿ ಅಪಾರವಾದ ಅನುಭವ ಹೊಂದಿದ್ದಾರೆ. ಇವರ ಅನುಪಮ ಪತ್ರಿಕಾ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

Related Articles

Back to top button