ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ವಡಗಾವಿ ಸಫಾರ ಗಲ್ಲಿಯ ನಿವಾಸಿ, ಮಾಜಿ ನಗರ ಸೇವಕರು ಹಾಗೂ ವಡಗಾವಿ ದೇವಾಂಗ ಸಮಾಜದ ಅಧ್ಯಕ್ಷ ಸುರೇಶ್ ರಾಮಚಂದ್ರ ಕಿತ್ತೂರ ಬುಧವಾರ ನಿಧನರಾದರು. ಇವರಿಗೆ 68 ವರ್ಷ ವಯಸ್ಸಾಗಿತ್ತು.
ಇವರ ಅಂತ್ಯಕ್ರಿಯೆ ಗುರುವಾರ ಮುಂಜಾನೆ 11 ಗಂಟೆಗೆ ಖಾಸಭಾಗ ಸ್ಮಶಾನದಲ್ಲಿ ಜರುಗುವುದು. ಇವರ ನಿಧನಕ್ಕೆ ವಡಗಾವಿ ಖಾಸಭಾಗ ಭಾಗದ ಹಿರಿಯರು ನೇಕಾರರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಪತ್ನಿ, ಇಬ್ಬರು ಗಂಡು ಮಕ್ಕಳು, ಓರ್ವ ಪುತ್ರಿ , ಮೊಮ್ಮಕ್ಕಳು ಮರಿ ಮಕ್ಕಳು ಅಪಾರ ಬಂಧು ಬಳಗನ್ನು ಅಗಲಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ