ಹಾಲಿನ ಖರೀದಿ ಮತ್ತು ಮಾರಾಟದ ಮಧ್ಯೆ ಇರುವ ಅಂತರವನ್ನು ಕಡಿಮೆ ಮಾಡಿ ಎಂದು ರೈತರು
ಪ್ರಗತಿವಾಹಿನಿ ಸುದ್ದಿ, ಬೆಟಗೇರಿ: ಅರಭಾವಿ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಬೆಟಗೇರಿ ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಈಚೆಗೆ ಅನಿರೀಕ್ಷಿತವಾಗಿ ಭೇಟಿ ನೀಡಿದರು.
ಅನಿರೀಕ್ಷಿತವಾಗಿ ಬಂದ್ ಸಾಹುಕಾರ್ ಕಂಡು ಹಾಲು ಹಾಕಲು ಬಂದಿದ್ದ ರೈತರು ಪುಳಕಿತಗೊಂಡರು. ಹಲವರು ಅವರ ಕಾಲಿಗೆ ಬೀಳಲು ಹೋದರು.
ಈ ವೇಳೆ ಅವರು ಹೈನುಗಾಗಾರಿಕೆ ಸಮಸ್ಯೆಗಳ ಕುರಿತು ಸ್ಥಳೀಯ ರೈತರ ಜೊತೆಗೆ ಚರ್ಚಿಸಿದರು. ಕೆಲವು ರೈತರು ಹೈನುಗಾರಿಕೆ ಸಮಸ್ಯೆಗಳ ಕುರಿತು ಸಾಹುಕಾರ್ ಮುಂದೆ ಹೇಳಿಕೊಂಡರು. ಇಂದಿನ ದುಬಾರಿ ದಿನದಲ್ಲಿ, ಪಶು ಆಹಾರದ ಬೇಲೆ ಏರಿಕೆ ಸಂದರ್ಭದಲ್ಲಿ ಹಾಲು ಉತ್ಪಾದನೆ ಕಷ್ಟವಾಗಿದೆ. ಹಾಲಿನ ಖರೀದಿ ಮತ್ತು ಮಾರಾಟದ ಮಧ್ಯೆ ಇರುವ ಅಂತರವನ್ನು ಕಡಿಮೆ ಮಾಡಿ, ಉತ್ಪಾದಕರಿಗೆ ಇನ್ನಷ್ಟು ಹೆಚ್ಚಿನ ದರ ನೀಡಬೇಕು ಎಂದು ಮನವಿ ಮಾಡಿದರು.
ಕೆಎಂಎಫ್ ರೈತರ ಪರವಾಗಿ ನಿಲ್ಲಲಿದೆ. ಎಲ್ಲರೀತಿಯ ಸಹಕಾರ ನೀಡಲಾಗುವುದು. ಹಾಲಿನ ದರ ಹೆಚ್ಚಳ ಕುರಿತು ಮುಂದಿನ ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
, ಇಲ್ಲಿಯ ಹಾಲು ಉತ್ಪಾದಕರ ಸಹಕಾರಿ ಸಂಘದ ಪ್ರಗತಿ ಕುರಿತು ಬಾಲಚಂದ್ರ ಜಾರಕಿಹೊಳಿ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಘದ ಮುಖ್ಯಕಾರ್ಯನಿರ್ವಾಹಕ ನಿಂಗಪ್ಪ ನೀಲಣ್ಣವರ, ಸಿಬ್ಬಂದಿ, ರೈತರು, ಗ್ರಾಹಕರು ಇದ್ದರು.
25 ಸದಸ್ಯರ ನಿವೃತ್ತಿಗೆ ಮುನ್ನ ಬೆಳಗಾವಿಯಲ್ಲಿ ಅಧಿವೇಶನ ನಡೆಸಿ – ಸಿಎಂಗೆ ಹೊರಟ್ಟಿ ಪತ್ರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ