ಪ್ರಗತಿವಾಹಿನಿ ಸುದ್ದಿ; ಹೈದರಾಬಾದ್: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ವಿಜ್ಞಾನಿಗಳು ಮತ್ತೊಂದು ಮೈಲುಗಲ್ಲು ಸಾಧಿಸಲು ಮುಂದಾಗಿದ್ದಾರೆ. ಚಂದ್ರಯಾನ-3 ಯಶಸ್ಸಿನ ಬೆನ್ನಲ್ಲೇ ಸೂರ್ಯಯಾನಕ್ಕೆ ಸಜ್ಜಾಗಿದ್ದು, ಆದಿತ್ಯ L-1 ನೌಕೆ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಬೆಳಿಗ್ಗೆ 11:50ಕ್ಕೆ ಆದಿತ್ಯ L-1 ಉಡಾವಣೆಯಾಗಲಿದೆ. ಆದಿತ್ಯ ಎಲ್ -1 ಉಡಾವಣೆ ಯಶಸ್ವಿಗಾಗಿ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ದೇವರ ಮೊರೆ ಹೋಗಿದ್ದಾರೆ. ತಿರುಪತಿಯ ಸುಳ್ಳುರುಪೇಟೆಯ ಚಂಗಾಲಮ್ಮ ಪರಮೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಆದಿತ್ಯ ಎಲ್ -1 ಮೂಲಕ ಇಸ್ರೋ ಸೂರ್ಯನ ಅಂಗಳದಲ್ಲಿ ಅಧ್ಯಯನ ನಡೆಸಲಿದೆ. ಸೂರ್ಯನ ಸ್ಫೋಟದ ವಿದ್ಯಮಾನಗಳನ್ನು ಅಥೈಸಿಕೊಳ್ಳಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ