ಪ್ರಗತಿವಾಹಿನಿ ಸುದ್ದಿ; ಹೈದರಾಬಾದ್: ತಿರುಪತಿ ತಿರುಮಲ ದೇವಾಲಯ ಸಮಿತಿವತಿಯಿಂದ ಆರಂಭವಾಗಿದ್ದ ಶ್ರೀ ವೆಂಕಟೇಶ್ವರ ಭಕ್ತಿ ಚಾನಲ್ ಸಿಬ್ಬಂದಿ ಎಂತಹ ಅಸಹ್ಯ ಕೆಲಸ ಮಾಡಿದ್ದಾರೆ ನೋಡಿ. ತಿರುಮಲದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳ ಪ್ರಸಾರದ ಲಿಂಕ್ ನ್ನು ಕಳುಹಿಸುವ ಬದಲು ಪೋರ್ನ್ ವೆಬ್ ಸೈಟ್ ಲಿಂಕ್ ಗಳನ್ನು ಕಳುಹಿಸಿ ಸಿಕ್ಕಿಬಿದ್ದಿದ್ದಾರೆ.
ಭಕ್ತರ ಕೋರಿಕೆ ಮೇರೆಗೆ ಧಾರ್ಮಿಕ ಕಾರ್ಯಕ್ರಮಗಳ ಲಿಂಕ್ ಗಳನ್ನು ಕಳುಹಿಸಬೇಕಿತ್ತು. ಆದರೆ ಸಿಬ್ಬಂದಿಯೊಬ್ಬ ಅಶ್ಲೀಲ ವೆಬ್ ಸೈಟ್ ಗಳ ಲಿಂಕ್ ಗಳನ್ನು ಕಳುಹಿಸಿದ್ದಾನೆ. ಲಿಂಕ್ ಓಪನ್ ಮಾಡಿ ನೋಡಿದ ಭಕ್ತರು ಶಾಕ್ ಆಗಿದ್ದಾರೆ. ಭಕ್ತರು ಟಿಟಿಡಿಗೆ ದೂರು ನೀಡಿದ್ದಾರೆ. ತನಿಖೆ ನಡೆಸಿದ ಟಿಟಿಡಿ ಸಿಬ್ಬಂದಿಗಳಿಗೂ ಅಚ್ಚರಿಯಾಗಿದೆ. ಇದು ಓರ್ವ ಸಿಬ್ಬಂದಿಯ ಕೆಲಸವಾಗಿರಲಿಲ್ಲ, ಬರೋಬ್ಬರಿ 25 ಸಿಬ್ಬಂದಿಗಳು ಕಚೇರಿಯಲ್ಲಿ ಅಶ್ಲೀಲ ವೆಬ್ ಸೈಟ್ ಗಳನ್ನು ನೋಡುತ್ತಾ ಕಾಲ ಕಳೆಯುತ್ತಿದ್ದಾರೆ ಎಂಬುದು ಬಯಲಾಗಿದೆ.
ಭಕ್ತಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಬೇಕಾದ ಸಿಬ್ಬಂದಿಗಳು, ದೇವರ ಭಯವೂ ಇಲ್ಲದೇ ಕಚೇರೀಯಲ್ಲಿ ಅಶ್ಲೀಲ ವೆಬ್ ಸೈಟ್ ನೋಡಿ ಕಾಲ ಕಳೆದಿದ್ದಲ್ಲದೇ ಆ ಲಿಂಕ್ ಗಳನ್ನು ಭಕ್ತರಿಗೆ ಕಳುಹಿಸಿ ಕಾನೂನು ಬಾಹಿರ ಕೆಲಸ ಮಾಡಿರುವುದು ಅಪಚಾರ. ಸಿಬ್ಬಂದಿಗಳ ವಿರುದ್ಧ ಟಿಟಿಡಿ ಇದೀಗ ಕ್ರಮ ಕೈಗೊಂಡಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ