
ಪ್ರಗತಿವಾಹಿನಿ ಸುದ್ದಿ; ಇಂಫಾಲ್: ಮಾದಕ ದ್ರವ್ಯಗಳ ಅಡಗುತಾಣದ ಮೇಲೆ ದಾಳಿ ನಡೆಸಿದ ಪೊಲೀಸರು ಬರೋಬ್ಬರಿ 287 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿರುವ ಘಟನೆ ಮಣಿಪುರದ ತೌಬಾಲ್ ಜಿಲ್ಲೆಯಲ್ಲಿ ನಡೆದಿದೆ.
ಅಸ್ಸಾಂ ರೈಫಲ್ಸ್ ಹಾಗೂ ಮಣಿಪುರ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮಾದಕ ದ್ರವ್ಯ ವಶಕ್ಕೆ ಪಡೆಯಲಾಗಿದೆ. 72 ಕೆಜಿ ತೂಕದ ಬ್ರೌನ್ ಶುಗರ್ ಜಪ್ತಿ ಪಡೆಯಲಾಗಿದ್ದು, ಇದರ ಮೌಲ್ಯ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ 287 ಕೋಟಿ ರೂ ಎನ್ನಲಾಗಿದೆ.
ತೌಬಾಲ್ ಜಿಲ್ಲೆಯ ಕಾಮು ಗ್ರಾಮದ ಅಡಗು ತಾಣವೊಂದರಲ್ಲಿ ಈ ಮಾದಕ ದ್ರವ್ಯ ಅಡಗಿಸಿಡಲಾಗಿದ್ದು, ದೇಶದ ವಿವಿಧ ರಾಜ್ಯಗಳಿಗೆ ಸರಬರಾಜು ಮಾಡಲು ಆರೋಪಿಗಳು ಸಂಚು ರೂಪಿಸಿದ್ದರು.