Belagavi NewsBelgaum NewsKannada NewsKarnataka NewsLatestPolitics

ದೇವಾಲಯದಲ್ಲಿ ಕಸಗುಡಿಸಿ ಸ್ವಚ್ಚಗೊಳಿಸಿದ ಶಾಸಕಿ ಶಶಿಕಲಾ ಜೊಲ್ಲೆ

ಅಂಬಿಕಾ ದೇವಾಲಯದಲ್ಲಿ ಸ್ವಚ್ಛ ತೀರ್ಥ ಯಾತ್ರೆಗೆ ಚಾಲನೆ

ಪ್ರಗತಿವಾಹಿನಿ ಸುದ್ದಿ: ನಮ್ಮ ಪೂರ್ವಜರು ಕಳೆದ 500 ಕ್ಕೂ ಅಧಿಕ ವರ್ಷ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಕನಸನ್ನು ಕಂಡಿದ್ದರು. ಇಂದು ಅದು ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅವರಿಂದ ಅದು ನನಸಾಗುತ್ತಿದೆ. ಜ. 22 ರಂದು ರಾಮ ಜನ್ಮಭೂಮಿ ಆಯೋಧ್ಯೆಯಲ್ಲಿ ಶ್ರೀ ರಾಮನ, ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಯಾಗುತ್ತಿದೆ. ಇದರ ಹಿನ್ನಲೆಯಲ್ಲಿ ಅವರು ದೇಶದ ಪ್ರತಿಯೋಂದು ದೇವಸ್ಥಾನವನ್ನು ಸ್ವಚ್ಚಗೊಳಿಸುವುದು ಮತ್ತು ದೀಪಾವಳಿ ಮರುಕಳಿಸುವಂತೆ ತಮ್ಮ ಮನೆಗಳನ್ನು ದೀಪಗಳಿಂದ ಅಲಂಕರಿಸಿ ಎಂಬ ಸುಂದರ ಪರಿಕಲ್ಪನೆಯನ್ನು ಕಾರ್ಯವನ್ನು ಮಾಡಲು ನಮಗೆ ಕರೆ ನೀಡಿದ್ದಾರೆ. ಅದರ ಅಂಗವಾಗಿ ನನ್ನ ನಿಪ್ಪಾಣಿ ಕ್ಷೇತ್ರದ ಮಮದಾಪೂರದ ಐತಿಹಾಸಿಕ ಮತ್ತು ಪುರಾತಣ ಅಂಬಿಕಾ ದೇವಾಲಯಲ್ಲಿ ಇಂದು ಇದಕ್ಕೆ ಚಾಲನೆ ನೀಡುತ್ತಿದ್ದೇವೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.


ತಾಲೂಕಿನ ಮಮದಾಪೂರ ಗ್ರಾಮದ ಅಂಬಿಕಾ ದೇವಾಲಯದಲ್ಲಿ ಸ್ವಚ್ಛ ತೀರ್ಥ ಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು. ದೇಶದಲ್ಲಿ ಭಾರತೀಯ ಸಂಸ್ಕೃತಿ ಉಳಿವಿಗಾಗಿ ಮತ್ತು ಗತ ವೈಭವ ಪ್ರಾಪ್ತಿಗಾಗಿ ಮೋದಿ ಅವರು ಮಕರ ಸಂಕಾಂತಿಯ ಶುಭ ಸಂದರ್ಭದಲ್ಲಿ ಈ ಕಾರ್ಯವನ್ನು ನಮಗೆ ನೀಡಿದ್ದಾರೆ. ನಾಳೆಯಿಂದ ನಮ್ಮ ಕ್ಷೇತ್ರದಲ್ಲಿ ಪ್ರತಿಯೊಂದು ಊರುಗಳಲ್ಲಿ ಎಲ್ಲ ದೇವಾಲಯಗಳನ್ನು ಸ್ವಚ್ಚಗೊಳಿಸುವ ಕಾರ್ಯ ನಮ್ಮ ಕಾರ್ಯಕರ್ತರ ಜತೆಗೂಡಿ ಭರದಿಂದ ಸಾಗಲಿದೆ. ನಮ್ಮ ತಲೆಮಾರಿನ ಜನ ನಾವು ನೀಜಕ್ಕೂ ಪೂಣ್ಯವಂತರು, ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣವಾಗುತ್ತಿದ್ದನ್ನು ನೋಡಲು ನಾವು ನಿಜಕ್ಕೂ ಸೌಭಾಗ್ಯವಂತರು ಎಂದರು.


ಈ ಸಂದರ್ಭದಲ್ಲಿ ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಬಾಳಾಸಾಹೇಬ ಕದಮ, ಆಕಾಶ ಪಾಟೀಲ, ದಾದಾ ಪಾಟೀಲ, ಕೀರಣ ಚವ್ಹಾಣ, ಗೀತಾ ಪಾಟೀಲ, ವಿಶ್ರಾಂತಿ ಮಾನೆ, ಸರೀತಾ ಪಾಟೀಲ, ಮಹಾವೀರ ಗೋರವಾಡೆ, ರಾವಸಾಹೇಬ ನಾಯಿಕ ಸೇರಿದಂತೆ ಪಕ್ಷದ ಕಾರ್ಯಕರ್ತರು, ಅಂಬಿಕಾ ಂದಿರದ ಟ್ರಸ್ಟೀಗಳು, ಪೂಜಾರಿಗಳು ಉಪಸ್ಥಿತರಿದ್ದರು.

Related Articles

Back to top button