Belagavi NewsBelgaum NewsKannada News

ದೇಶಭಕ್ತಿ ಗೀತೆಗಳ ಸ್ಪರ್ಧೆ


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಇಲ್ಲಿಯ ಭರತೇಶ ಶಿಕ್ಷಣ ಸಂಸ್ಥೆಯ ಪ್ರತಿ ವರ್ಷದಂತೆ ಈ ವರ್ಷವೂ ವೈಯಕ್ತಿಕ ಹಾಗೂ ಸಾಮೂಹಿಕ ದೇಶ ಭಕ್ತಿ ಗೀತೆಗಳ ಗಾಯನ ಸ್ಪರ್ಧೆಯನ್ನು ಆಯೋಜಿಸಿದೆ.

ಸ್ಪರ್ಧೆಯು ಎರಡು ಹಂತಗಳಲ್ಲಿ ನಡೆಯಲಿದ್ದು, ಮಂಗಳವಾರ ದಿ. ೨೩/೧/೨೦೨೪ ರಂದು ೧೬ ವರ್ಷದ ಒಳಗಿನವರಿಗೆ ವೈಯಕ್ತಿಕ ಹಾಗೂ ಸಾಮೂಹಿಕ, ಬುಧವಾರ ದಿ. ೨೪/೧/೨೦೨೪ ರಂದು ೧೬ ವರ್ಷ ಮೇಲ್ಪಟ್ಟವರಿಗೆ ವೈಯಕ್ತಿಕ ಹಾಗೂ ಸಾಮೂಹಿಕ ಸ್ಪರ್ಧೆಗಳನ್ನು ಇಡಲಾಗಿದೆ. ಸ್ಪರ್ಧೆಯಲ್ಲಿ ಬೇರೆ ಬೇರೆ ಭಾರತೀಯ ಭಾಷೆಯ ಎರಡು ದೇಶಭಕ್ತಿ ಗೀತೆ ಹಾಡಬೇಕು.

Home add -Advt

ವಿಜೇತರಿಗೆ ೨೫,೦೦೦ ರೂ ನಗದು ಹಾಗೂ ಆಕರ್ಷಕ ಟ್ರೋಫಿ ಕೊಡಲಾಗುವುದು, ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತ ವಿದ್ಯಾರ್ಥಿಗಳು, ಮಹಿಳಾ ಮಂಡಳದವರು ಹಾಗೂ ಸಾರ್ವಜನಿಕರು ಭಾಗವಹಿಸಬೇಕೆಂದು ಸಂಘಟಕರು ಕೋರಿದ್ದಾರೆ.

ಹೆಚ್ಚಿನ ವಿವರಗಳಿಗಾಗಿ ಜ್ಯೋತಿ ಮಿರಜಕರ (೯೭೩೧೭-೯೭೪೮೨), ಎಸ್. ಎನ್. ಅಕ್ಕಿ (೯೫೯೧೩-೯೬೦೯೦) ಎ. ಎ. ಸನದಿ (೯೬೮೬೧-೨೭೧೩೪) ಇವರನ್ನು ಸಂಪರ್ಕಿಸಬಹುದು.

Related Articles

Back to top button