*ವಾಲ್ಮೀಕಿ ಪೀಠದ ಸ್ವಾಮೀಜಿಗೆ ಈಡಿಗ ಸಮಾಜದ ಸ್ವಾಮೀಜಿ ಟಾಂಗ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಿದ್ದರಾಮಯ್ಯ ನಂತರ ಡಿ.ಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಬೇಕು ಎಂದು ಹೇಳುವ ಮೂಲಕ ವಾಲ್ಮೀಕಿ ಪೀಠದ ಸ್ವಾಮೀಜಿ ಬೇಡಿಕೆಗೆ ಈಡಿಗ ಸಮಾಜದ ಸ್ವಾಮೀಜಿ ಕೌಂಟರ್ ಕೊಟ್ಟಿದ್ದಾರೆ.
ಬೆಳಗಾವಿಯಲ್ಲಿ ಚಿತ್ತಾಪುರದ ಈಡಿಗ ಮಠದ ಪ್ರಣವಾನಂದ ಸ್ವಾಮೀಜಿ ಮಾಧ್ಯಮಗಳ ಜೊತೆ ಮಾತನಾಡಿದ್ದು, ಹೈಕಮಾಂಡ್ ಡಿಕೆಶಿ ಅವರನ್ನು ಸಿಎಂ ಮಾಡದಿದ್ದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ವನಾಶ ಆಗಲಿದೆ ಎಂದು ಕಾಂಗ್ರೆಸ್ ಹೈಕಮಾಂಡ್‌ಗೆ ಪ್ರಣವಾನಂದ ಸ್ವಾಮೀಜಿ ಎಚ್ಚರಿಕೆ ನೀಡಿದರು.
ರಾಜ್ಯದ ಅತಿ ಹಿಂದುಳಿದ 32 ಸಮಾಜದ ಮಠಾಧಿಪತಿಗಳು ಡಿಕೆಶಿ ಬೆನ್ನಿಗೆ ಇದ್ದಾರೆ. ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂದು ನಮ್ಮೆಲ್ಲರ ಹಕ್ಕೋತ್ತಾಯವಾಗಿದೆ. ಈ ಸರ್ಕಾರ ಈಡಿಗ ಸಮಾಜ ಕಡೆಗಣಿಸಿದೆ, ಕಾಂಗ್ರೆಸ್‌ನಲ್ಲಿ ಸಾಮಾಜಿಕ ನ್ಯಾಯ ಇಲ್ಲದಾಗಿದೆ. ನಮ್ಮ ಸಮಾಜಕ್ಕೆ ಆಗಿರುವ ಅನ್ಯಾಯ ಖಂಡಿಸಿ ಜನವರಿ 6ರಿಂದ ಚಿತ್ತಾಪುರದಿಂದ ಕಲಬುರಗಿವರೆಗೆ ಪಾದಯಾತ್ರೆ ಮಾಡುತ್ತೇವೆ. ಸಿದ್ದರಾಮಯ್ಯ ಸಮಾನತೆ, ಅಹಿಂದ ಹೆಸರಲ್ಲಿ ಅಧಿಕಾರಕ್ಕೆ ಬಂದರು. ಪ್ರತಿಪಕ್ಷ ನಾಯಕರಿದ್ದಾಗ ಮಾತ್ರ ಸಿದ್ದರಾಮಯ್ಯಗೆ ಅಹಿಂದಾ ಬಗ್ಗೆ ಕಾಳಜಿ ಇತ್ತು. ಆದರೆ ಅಧಿಕಾರಕ್ಕೆ ಬಂದ ನಂತರ ಸಿದ್ದರಾಮಯ್ಯ ಅಹಿಂದಾ ವರ್ಗ ನಿರ್ಲಕ್ಷ್ಯ ವಹಿಸಿದ್ದಾರೆ.
ಅತಿ ಹಿಂದುಳಿದ ಮಠಾಧೀಶರ ಒಕ್ಕೂಟ 32 ಮಠಾಧೀಶರ ಡಿಕೆಶಿ ಮನೆಗೆ ಹೋಗಿ ಚರ್ಚೆ ಮಾಡಿದ್ದೇವೆ. ಡಿಕೆಶಿ ಸಿಎಂ ಆಗಬೇಕು, ಕಾಂಗ್ರೆಸ್ ಅಧಿಕಾರಕ್ಕೆ ಬರುವಲ್ಲಿ ಡಿಕೆಶಿ ಪಾತ್ರ ಪ್ರಮುಖವಾಗಿದೆ. ಒಕ್ಕಲಿಗ ಸಮಾಜದಲ್ಲಿ ಹಿಂದೂಳಿದವರು ಇದ್ದಾರೆ, ಉಳ್ಳವರು ಇದ್ದಾರೆ. ಹೈಕಾಂಡ್ ಡಿಕೆಶಿರನ್ನು ಸಿಎಂ ಮಾಡದಿದ್ರೆ ಕಾಂಗ್ರೆಸ್ ಸರ್ವಜನಾಶ ಆಗುತ್ತೆ ಎಂದು ಸ್ವಾಮೀಜಿ ಎಚ್ಚರಿಕೆ ನೀಡದರು.
ವಾಲ್ಮೀಕಿ ಪೀಠದ ರಾಜನಹಳ್ಳಿ ಪ್ರಸನ್ನಾನಂದ ಸ್ವಾಮೀಜಿ ಹೇಳಿದ್ದೇನು..?
ಸಿಎಂ ಆಗಿ ಸಿದ್ದರಾಮಯ್ಯ ಮುಂದುವರೆದರೆ ನಮ್ಮ ಹಾಗೂ ವಾಲ್ಮೀಕಿ ಸಮಾಜದ ಶಾಸಕರ ವಿರೋಧವಿಲ್ಲ. ಆದರೆ ಒಂದು ವೇಳೆ ಬದಲಾವಣೆಯಾದರೆ ಅಹಿಂದ ಮುಖಂಡರಿಗೆ ಸಿಎಂ ಸ್ಥಾನ ನೀಡಬೇಕು ಎಂದು ಪ್ರಸನ್ನಾನಂದ ಸ್ವಾಮೀಜಿ ಟಾಂಗ್ ನೀಡಿದ್ದರು.




