
ಪ್ರಗತಿವಾಹಿನಿ ಸುದ್ದಿ: ರಾಜ್ಯ ಹಿಂದುಳಿದ ವರ್ಗಗಳ ಸಮುದಾಯಕ್ಕೆ ಸೇರಿದ ನಾನಾ ಮಠಗಳ ಸ್ವಾಮೀಜಿಗಳು ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಶುಕ್ರವಾರ ಭೇಟಿ ಮಾಡಿ ಆಶೀರ್ವದಿಸಿ, ಸಮಾಲೋಚನೆ ನಡೆಸಿದರು.
ಉಪಸ್ಥಿತರಿದ್ದ ಸ್ವಾಮೀಜಿಗಳು:
- ಡಾ. ಶ್ರೀ. ಪ್ರಣಾವಾನಂದ ಸ್ವಾಮೀಜಿಗಳು, ಈಡಿಗ ಸಮಾಜದ ಪೀಠಾಧಿಪತಿಗಳು, ರಾಣೇಬೆನ್ನೂರು.
- ಶ್ರೀ ಜಗದ್ಗುರು ಬಸವನಾಗಿ ಶರಣರು, ಛಲವಾದಿ ಜಗದ್ಗುರು ಪೀಠ, ಚಿತ್ರದುರ್ಗ.
- ಶ್ರೀ ಬಸವಮೂರ್ತಿ ಕುಂಬಾರಗುಡ್ಡಯ್ಯ ಸ್ವಾಮೀಜಿಗಳು, ಕುಂಬಾರ ಪೀಠ, ಚಿತ್ರದುರ್ಗ.
- ಶ್ರೀ ದೊಡ್ಡಂದ್ರ ಸ್ವಾಮೀಜಿಗಳು, ವಿಶ್ವಕರ್ಮ ಸಮಾಜದ ಏಕದಂಡಿ ಮಠ, ಸುಲೇಪೇಟ.
- ಶ್ರೀ ಭಗೀರಥಾನಂದ ಸ್ವಾಮೀಜಿಗಳು, ಉಪ್ಪಾರ ಸಮಾಜದ ಭಗೀರಥ ಪೀಠ, ಕಲಬುರ್ಗಿ.
- ಶ್ರೀ ಗುರುರಾಜೇಂದ್ರ ಶಿವಯೋಗಿಗಳು, ಹೂಗಾರ ಪೀಠ, ಕಲಬುರಗಿ.
- ಶ್ರೀ ನಿರಂಜನ ಅಪ್ಪಣ್ಣ ವೀರ ದೇವರು, ಹಡಪದ ಸಮಾಜ, ಶಹಬಾದ್.
- ಶ್ರೀ ಸಂಗಮೇಶ್ವರ ಸ್ವಾಮೀಜಿಗಳು ಗಾಣಿಗರ ಸಮಾಜದ ವಿರಕ್ತ ಮಠ, ಯರಗೋಳ, ಯಾದಗಿರಿ.
- ಶ್ರೀ ಪ್ರಭುಲಿಂಗ ಸ್ವಾಮೀಜಿಗಳು, (ನೇಕಾರ ಸಮಾಜ) ಐರಣಿ.
- ಶ್ರೀ ಪ್ರಕಾಶನಂದ ಸ್ವಾಮೀಜಿಗಳು (ವಾಲ್ಮೀಕಿ ಸಮಾಜ) ಹಾವೇರಿ.
- ಶ್ರೀ ರಾಜಗುರು ಸ್ವಾಮೀಜಿ ಕೋಲಿ ಸಮಾಜ, ಹುಬ್ಬಳ್ಳಿ.



