Uncategorized

ಸ್ವರ್ಣವಲ್ಲೀ ಸ್ವಾಮೀಜಿ ದ್ವಯರ ಚಾತುರ್ಮಾಸ್ಯ ವೃತ

ಪ್ರಗತಿವಾಹಿನಿ ಸುದ್ದಿ, ಸ್ವರ್ಣವಲ್ಲೀ : ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ಉಭಯ ಶ್ರೀಗಳು ಜುಲೈ‌ 21 ರಿಂದ ಸಪ್ಟೆಂಬರ್ 19 ರ ತನಕ ಚಾತುರ್ಮಾಸ್ಯ ವೃತಾಚರಣೆಯಲ್ಲಿ ಇರಲಿದ್ದಾರೆ.

ಮಠದ ಹಿರಿಯ ಯತಿಗಳಾದ ಶ್ರೀಮಜ್ಜಗದ್ಗುರು‌ ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಗಳು ಹಾಗೂ ಕಿರಿಯ ಸ್ವಾಮೀಜಿ ಶ್ರೀ ಆನಂದಭೋದೇಂದ್ರ ಸರಸ್ವತೀ‌ ಸ್ವಾಮೀಜಿಗಳು ಚಾತುರ್ಮಾಸ್ಯ ವೃತ ಸಂಕಲ್ಪಿಸಲಿದ್ದಾರೆ.
ಜುಲೈ 21ರ ಬೆಳಿಗ್ಗೆ 10 ಗಂಟೆಗೆ ಚಾತುರ್ಮಾಸ್ಯ ವ್ರತವನ್ನು ಭಗವಾನ್ ವ್ಯಾಸರ ಪೂಜೆ ಸಲ್ಲಿಸಿ ಆರಂಭಿಸಲಿದ್ದಾರೆ‌. ಹಿರಿಯ ಶ್ರೀಗಳ 34ನೇ ಚಾತುರ್ಮಾಸ್ಯ ವ್ರತ ಮತ್ತು ಕಿರಿಯ ಶ್ರೀಗಳ ಮೊದಲನೆಯ ಚಾತುರ್ಮಾಸ್ಯ ವ್ರತ ಇದಾಗಿದ್ದು ಅಂದು ಸಂಜೆ 4 ಗಂಟೆಗೆ ಉಭಯ ಶ್ರೀಗಳ ಸಾನ್ನಿಧ್ಯದಲ್ಲಿ ಧರ್ಮಸಭೆ ನಡೆಯಲಿದೆ.

ನೂತನ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ವೇಳೆ ಪ್ರಸಿದ್ಧ ಗಾಯಕ, ತಾನ್ಸೇನ್ ಪ್ರಶಸ್ತಿ ಪುರಸ್ಕೃತ ಪಂ.ಗಣಪತಿ ಭಟ್ಟ ಹಾಸಣಗಿ ಹಾಗೂ ಶಿಲ್ಪಿ ರಾಮಚಂದ್ರ ಹೆಗಡೆ ಕೆಶಿನ್ಮನೆ ಅವರನ್ನು ಶ್ರೀಮಠದಿಂದ ಗೌರವಿಸಲಾಗುತ್ತಿದೆ. ಚಾತುರ್ಮಾಸ್ಯದ ಸಂಕಲ್ಪ ದಿನದಂದು ನಾಲ್ಕು ವೇದ, ಉಪನಿಷತ್ತುಗಳು, ಹದಿನೆಂಟು ಪುರಾಣಗಳ ಪಾರಾಯಣಗಳು ನಡೆಯಲಿವೆ.

ಪ್ರತಿ ದಿನ ಮಹಾಭಾರತದ ಪ್ರವಚನಗಳು ನಡೆಯಲಿವೆ. ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ವಿವಿಧ ಸೀಮೆಗಳ ಶಿಷ್ಯರ ಸೇವೆಗಳು ನಡೆಯಲಿದೆ ಎಂದು‌ ಮಠದ ಪ್ರಕಟನೆ ತಿಳಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button