Latest

ಪೊಲೀಸ್ ಕಾನ್ಸ್ ಟೇಬಲ್ ಬಂಧನ

ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಅತ್ಯಾಚಾರ ಸಂತ್ರಸ್ತೆ ಮೇಲೆ ಅತ್ಯಾಚಾರವೆಸಗಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಕಡಬ ಪೊಲೀಸ್ ಠಾಣೆ ಕಾನ್ಸ್ ಟೇಬಲ್ ಶಿವರಾಜ್ ನನ್ನು ಬಂಧಿಸಲಾಗಿದೆ ಎಂದು ದಕ್ಷಿಣ ಕನ್ನಡ ಎಸ್.ಪಿ.ರಿಷಿಕೇಶ್ ಸೋನಾವಣೆ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಅವರು, ಪ್ರಕರಣ ಸಂಬಂಧ ಕಡಬ ಠಾಣೆ ಕಾನ್ಸ್ ಟೇಬಲ್ ಶಿವರಾಜ್ ನನ್ನು ಕಡಬ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತ ಯುವತಿ ಹಾಗೂ ಆಕೆಯ ತಾಯಿ ಪತ್ತೆಯಾಗಿದ್ದಾರೆ ಎಂದು ತಿಳಿಸಿದರು.

Home add -Advt

2019ರಲ್ಲಿ 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದ ಪ್ರಕರಣ ಕಡಬ ಠಾಣೆಯಲ್ಲಿ ದಾಖಲಾಗಿತ್ತು. ಸಂತ್ರಸ್ತೆ ಯುವತಿಗೆ ಸಮನ್ಸ್ ನೀಡುವ ನೆಪದಲ್ಲಿ ಕಡಬ ಠಾಣೆ ಕಾನ್ಸ್ ಟೇಬಲ್ ಶಿವರಾಜ್ ಮನೆಗೆ ಬರುತ್ತಿದ್ದರು. ಇದೀಗ ಕಾನ್ಸ್ ಟೇಬಲ್ ಶಿವರಾಜ್ ಸಂತ್ರಸ್ತೆ ಯುವತಿ ಮೇಲೆ ಅತ್ಯಾಚಾರವೆಸಗಿದ್ದು, ಆಕೆ ಗರ್ಭವತಿಯಾಗುತ್ತಿದ್ದಂತೆ ಅಬಾರ್ಷನ್ ಮಾಡಿಸಿಕೊಳ್ಳುವಂತೆ ಬೆದರಿಕೆಯೊಡ್ಡುತ್ತಿದ್ದಾನೆ. ಅಲ್ಲದೇ ಸಂತ್ರಸ್ತ ಯುವತಿ ಹಾಗೂ ಆಕೆ ತಾಯಿ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದು, ಕಾನ್ಸಟೇಬಲ್ ಶಿವರಾಜ್ ಕೂಡ ತಲೆಮರೆಸಿಕೊಂಡಿದ್ದಾಗಿ ನಿನ್ನೆ ಸಂತ್ರಸ್ತೆ ತಂದೆ ದಕ್ಷಿಣ ಕನ್ನಡ ಜಿಲ್ಲೆ ಕಡಬ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ರೇಪ್ ಸಂತ್ರಸ್ತೆ ಮೇಲೆ ಪೊಲೀಸ್ ಪೇದೆ ಅತ್ಯಾಚಾರ; ಗರ್ಭವತಿಯಾಗುತ್ತಿದ್ದಂತೆ ಪರಾರಿ

ಪ್ರವಾಹದಲ್ಲಿ ಕೊಚ್ಚಿ ಹೋದ ಬಸ್

Related Articles

Back to top button