Kannada NewsKarnataka NewsLatest

ರಾಯಬಾಗ ಬಳಿ ರೈಲ್ವೆ ಹಳಿ ಮೇಲೆ ನಾಲ್ವರ ಆತ್ಮಹತ್ಯೆ

ಪ್ರಗತಿವಾಹಿನಿ ಸುದ್ದಿ, ರಾಯಬಾಗ – ರಾಯಬಾಗ್ ತಾಲೂಕಿನ ಭಿರಡಿ ಗ್ರಾಮದ ಒಂದೇ ಕುಟುಂಬದ 4 ಜನರು ರಾಯಬಾಗ ರೈಲ್ವೆ  ಹಳಿ ಮೇಲೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬುಧವಾರ ರಾತ್ರಿ ಘಟನೆ ನಡೆದಿದೆ. ರಾಯಬಾಗ್ ತಾಲೂಕಿನ ಭಿರಡಿ ಗ್ರಾಮದ ಕಲ್ಲಪ್ಪ ಬಡಿಗೇರ ಮತ್ತು ಆತನ ಪತ್ನಿ ಇಬ್ಬರು ಗಂಡು ಮಕ್ಕಳು  ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾತಪ್ಪ ಅಣ್ಣಪ್ಪ ಸುತಾರ (60),ಮಹಾದೇವಿ ಸಾತಪ್ಪ ಸುತಾರ (50), ಸಂತೋಷ ಸಾತಪ್ಪ ಸುತಾರ (26), ದತ್ತಾತ್ರಯ ಸಾತಪ್ಪ ಸುತಾರ (28) ಆತ್ಮಹತ್ಯೆ ಮಾಡಿಕೊಂಡವರು.

ತಂದೆ ಮಾಡಿದ ಸಾಲ ಹಾಗೂ ಸಾಲಗಾರರ ಕಿರುಕುಳ ತಾಳಲಾರದೆ  ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಗೊತ್ತಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯಬೇಕಾಗಿದೆ.

Related Articles

Back to top button