ಭಾರಿ ಚರ್ಚೆಗೆ ಗ್ರಾಸವಾದ ಸುಶಾಂತ್ ಸೋದರಿ ಟ್ವೀಟಾಸ್ತ್ರ

ಪ್ರಗತಿವಾಹಿನಿ ಸುದ್ದಿ, ಮುಂಬೈ: ಸಂದೇಹಾಸ್ಪದ ರೀತಿಯಲ್ಲಿ ಸಾವಿಗೀಡಾದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಹೋದರಿಯ ಟ್ವೀಟ್ ಒಂದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಯಾವುದೇ ವ್ಯಕ್ತಿಗೆ ನಿರ್ದೇಶನ ನೀಡಿಲ್ಲ: ‘ನೀವು ವೇಶ್ಯೆಯಾಗಿಯೇ ಉಳಿಯುತ್ತೀರಿ’ ಎಂದು ಸುಶಾಂತ್ ಸಹೋದರಿ ಪ್ರಿಯಾಂಕಾ ಸಿಂಗ್ ಟ್ವೀಟ್ ಮಾಡಿದ್ದಾರೆ.
ಪ್ರಿಯಾಂಕಾ ಅವರು ತಮ್ಮ ಟ್ವೀಟ್ ನಲ್ಲಿ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿದ್ದು, ಅದರಲ್ಲಿ “ನೀವೇಕೆ ಭಯಪಡುತ್ತೀರಿ? ನೀವು ವೇಶ್ಯೆಯಾಗಿದ್ದಿರಿ, ಈಗಲೂ ಇದ್ದೀರಿ, ಮತ್ತು ಮುಂದೆಯೂ ಇರುವಿರಿ” ಎಂದು ಬರೆದಿದ್ದಾರೆ. “ಇದು ನಮ್ಮ ಜಗತ್ತಿನಲ್ಲಿ ಪ್ರಚಲಿತದಲ್ಲಿರುವ ವ್ಯವಹಾರಗಳ ಸ್ಥಿತಿಯ ವಿರುದ್ಧ ನನ್ನ ಸಾಮಾನ್ಯ ಆಕ್ರೋಶವಾಗಿತ್ತು” ಎಂದು ಸಹ ಅವರು ಹೇಳಿದ್ದಾರೆ.
ಪ್ರಿಯಾಂಕಾ ತಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದ್ದರೂ ಈ ಟ್ವೀಟಾಸ್ತ್ರ ಹೊಡೆದಿರುವುದು ಯಾರಿಗೆಂಬುದೇ ಈಗಿನ ಚರ್ಚೆಯ ವಿಷಯವಾಗಿದೆ. ಬಹುತೇಕ ಮಾಧ್ಯಮಗಳು, ಜಾಲತಾಣಗಳಲ್ಲಿ ಇದನ್ನು ರಿಯಾ ಚಕ್ರವರ್ತಿಗೆ ಹೇಳಿರುವುದಾಗಿ ವ್ಯಾಖ್ಯಾನಿಸಲಾಗಿದ್ದು ಯಾವುದಕ್ಕೂ ಸ್ವತಃ ಪ್ರಿಯಾಂಕಾ ಸಿಂಗ್ ಈ ಬಗ್ಗೆ ತುಟಿಬಿಚ್ಚಬೇಕಿದೆ.




