Politics

*ಹೊಸ ಬಾಂಬ್ ಸಿಡಿಸಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ*

ಪ್ರಗತಿವಾಹಿನಿ ಸುದ್ದಿ: ನನ್ನ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ನಡುವೆ ಬಿರುಕು ಮೂಡಿಸುವ ಯತ್ನ ನಡೆಯುತ್ತಿದೆ. ನನ್ನ ಬಿಎಸ್ ವೈ ನಡುವಿನ ಟಾಕ್ ವಾರ್ ಕೇವಲ ರಾಜಕೀಯವಾದದ್ದು, ಬಿಜೆಪಿ-ಜೆಡಿಎಸ್ ನವರು ಉತ್ತಮವಾದ ಆಡಳಿತ ನೀಡಿದ್ದೇವೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಬಿಜೆಪಿ-ಜೆಡಿಎಸ್ ಪಾದಯಾತ್ರೆ ಸಮಾರೋಪ ಸಮಾವೇಶದಲ್ಲಿ ಮಾತನಾಡಿದ ಹೆಚ್.ಡಿ. ಕುಮಾರಸ್ವಾಮಿ, ನನ್ನ ನೇತೃತ್ವದಲ್ಲಿ ಕಾಂಗ್ರೆಸ್ 136 ಸ್ಥಾನ ಗೆದ್ದಿದೆ. ಸಿದ್ದರಾಮಯ್ಯ ಜೊತೆ ಈ ಬಂಡೆ ಇದೆ. ಅವರಿಗೆ ಕಲ್ಲು ಬಂಡೆಯಾಗಿ ನಿಂತಿದ್ದೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ ಈ ಹಿಂದೆ ಡಿ.ಕೆ.ಶಿವಕುಮಾರ್ ನನಗೂ ಇದೇ ರೀತಿ ಹೇಳಿದ್ದರು. ನಂತರ ಕೈಕೊಟ್ಟರು ಎಂದು ಟಾಂಗ್ ನೀಡಿದರು.

ನನ್ನ ಮಗನ ರಾಜಕೀಯ ಸ್ಥಾನಕ್ಕಾಗಿ ನನ್ನ ಅಣ್ಣನ ಮಗನ ವಿರುದ್ಧವೇ ಪಿತೂರಿ ನಡೆಸಿದ್ದೇನೆ ಎಂದು ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ. ಎಸ್.ಎಂ ಕೃಷ್ಣ ಅಳಿಯ ಸಿದ್ಧಾರ್ಥ್ ಅವರ ಸಾವಿಗೆ ಕಾರಣ ಯಾರು? ಅವರ ಆತ್ಮಹತ್ಯೆಗೆ ಏನು ಕಾರಣ ಎಂಬುದನ್ನು ಜನರ ಮುಂದೆ ಬಹಿರಂಗ ಪಡಿಸುವಿರೇ? ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಅಲ್ಲದೇ ಡಿ.ಕೆ.ಶಿವಕುಮಾರ್ ಜೇಡರಹಳ್ಳಿಯಲ್ಲಿ ಮ್ಯಾನ್ ಹೋಲ್ ಚೇಂಬರ್ ಕಳ್ಳತನ ಮಾಡುತ್ತಿದ್ದರು ಎಂದು ಆರೋಪಿಸಿದ್ದಾರೆ.

Related Articles

Back to top button