Belagavi NewsBelgaum NewsKannada NewsKarnataka NewsNationalPolitics

*ರೈತರ ಪ್ರತಿಭಟನೆ ಗಮನದಲ್ಲಿದೆ: ಸಚಿವ ಸತೀಶ್ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಬ್ಬಿನ ಬೆಲೆ 3500 ನಿಗದಿ ಮಾಡುವಂತೆ ಕಳೆದ ನಾಲ್ಕೈದು ದಿನಗಳಿಂದ ನಡೆಯುತ್ತಿರುವ ರೈತರ ಹೋರಾಟದ ಬಗ್ಗೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರೈತರು ಮಾಡುತ್ತಿರುವ ಪ್ರತಿಭಟನೆ ಗಮನಕ್ಕೆ ಇದೆ. ಡಿಸಿ ಅವರು ರೈತರ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದಾರೆ. ಅವಶ್ಯಕತೆ ಬಿದ್ದರೆ ನಾವು ಹೋಗಿ ಭೇಟಿ ಮಾಡುತ್ತೇವೆ. ನಮ್ಮ ಪರವಾಗಿ ಡಿಸಿ ಅವರು ಭೇಟಿ ಮಾಡುತ್ತಿದ್ದಾರೆ ಎಂದರು.‌

Home add -Advt

ಬಿಜೆಪಿ ಬಿವೈ ವಿಜಯೇಂದ್ರ ಭೇಟಿ ಮಾಡಿದ್ದಾರೆ. ಅವರು ಹೋಗಲಿ ನಮ್ಮ ಪಕ್ಷದ ಶಾಸಕರು ಕೂಡಾ ಹೋಗಿ ಭೇಟಿ ಮಾಡಿದ್ದಾರೆ ಎಂದರು. 

Related Articles

Back to top button