Latest

ಪತ್ನಿಯನ್ನೇ ಲಾರಿ ಕೆಳಗೆ ತಳ್ಳಿ ಕೊಲೆಗೈದ ಪತಿ

ಪ್ರಗತಿವಾಹಿನಿ ಸುದ್ದಿ; ಚಿಕ್ಕಬಳ್ಳಾಪುರ: ದಂಪತಿ ನಡುವಿನ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ನಡೆದಿದೆ.

ಲಾರಿ ಕೆಳಗೆ ಪತ್ನಿಯನ್ನು ತಳ್ಳಿ ಪತಿಯೇ ಹೆಂಡತಿಯನ್ನು ಕೊಲೆಗೈದಿದ್ದಾನೆ. ಪತ್ನಿ ಸುಮೈರಾ ಸುಲ್ತಾನ್ (40) ಕೊಲೆಯಾದ ಮಹಿಳೆ. ಶಿಡ್ಲಘಟ್ಟ ಮೂಲದ ಮುನಿಕೃಷ್ಣ ಪತ್ನಿ ಸುಮೈರಾಳನ್ನು ಹತ್ಯೆ ಮಾಡಿದ್ದಾನೆ.

Home add -Advt

ಪತಿ ಪತ್ನಿ ನಡುವೆ ಆರಂಭವಾದ ಜಗಳ ನಡು ರಸ್ತೆಗೆ ಬಂದಿದೆ. ಇಬ್ಬರೂ ಮಾತಿಗೆ ಮಾತು ಬೆಳೆಸಿ ಜಗಳವಾಡಿಕೊಂಡು ರಸ್ತೆಗೆ ಬಂದು ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ರಸ್ತೆಯಲ್ಲಿ ಬರುತ್ತಿದ್ದ ಲಾರಿಯನ್ನು ಗಮನಿಸಿದ ಪತಿ ಮುನಿಕೃಷ್ಣ, ಉದ್ದೇಶಪೂರ್ವಕವಾಗಿ ಪತ್ನಿ ಸುಮೈರಾಳನ್ನು ತಳ್ಳಿದ್ದಾನೆ. ತಳ್ಳಿದ ರಭಸಕ್ಕೆ ಸುಮೈರಾ ಲಾರಿ ಕೆಳಗೆ ಬಿದ್ದಿದು, ಆಕೆಯ ಮೇಲೆಯೇ ಲಾರಿ ಹರಿದು ಹೋಗಿದೆ. ಸ್ಥಳದಲ್ಲೇ ಸುಮೈರಾ ಸಾವನ್ನಪ್ಪಿದ್ದಾಳೆ.

ಆರೋಪಿ ಮುನಿಕೃಷ್ಣನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಮುನಿಕೃಷ್ಣ ಹಾಗೂ ಸುಮೈರಾ ಇಬ್ಬರೂ ತಮ್ಮ ತಮ್ಮ ಸಂಸಾರವನ್ನು ಬಿಟ್ಟು ಬಂದು ಕಳೆದ 8 ವರ್ಷಗಳಿಂದ ಚಿಂತಾಮಣಿಗೆ ಬಂದು ಒಟ್ಟಿಗೆ ವಾಸವಾಗಿದ್ದರು. ಇಬ್ಬರಿಗೂ 4 ವರ್ಷದ ಮಗುವಿದೆ. ಆಗಾಗ ಜಗಳವಾಡುತ್ತಿದ್ದ ದಂಪತಿ ಇಂದು ರಸ್ತೆಯಲ್ಲಿ ನಿಂತು ಜಗಳ ಮಾಡಿಕೊಂಡಿದ್ದಾರೆ. ಕೊಲೆ ಮಾಡುವ ಉದ್ದೇಶದಿಂದಲೇ ಪತಿ, ಪತ್ನಿಯನ್ನು ರಸ್ತೆಗೆ ಎಳೆದು ತಂದಿದ್ದಾನೆ ಎನ್ನಲಾಗಿದೆ. ಮುನಿಕೃಷ್ಣ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೆಳಗಾವಿ: ಒಡಹುಟ್ಟಿದ ಅಣ್ಣನನ್ನೇ ಬರ್ಬರವಾಗಿ ಹತ್ಯೆಗೈದು ಠಾಣೆಗೆ ಬಂದು ಶರಣಾದ ತಮ್ಮ

https://pragati.taskdun.com/belagaviyounger-brothermurderelder-brother/

Related Articles

Back to top button