Latest

ಮುಸ್ಕಾನ್ ಳನ್ನು ಶ್ಲಾಘಿಸಿ ಸಾಹಿತ್ಯ ಬರೆದ ಮೋಸ್ಟ್ ವಾಂಟೆಡ್ ಉಗ್ರ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ರಾಜ್ಯದಲ್ಲಿ ನಡೆದ ಹಿಜಾಬ್ ವಿವಾದ ವಿಚಾರವಾಗಿ ಇದೀಗ ಜಗತ್ತಿನ ಮೋಸ್ಟ್ ವಾಂಟೆಡ್ ಉಗ್ರ, ಅಲ್ ಖೈದಾ ನಾಯಕ ಅಲ್ ಜವಾಹಿರಿ ಮಾತನಾಡಿದ್ದು, ಮಂಡ್ಯದ ಯುವತಿ ಮುಸ್ಕಾನ್ ಳನ್ನು ಶ್ಲಾಘಿಸಿದ್ದಾನೆ.

ಹಿಜಾಬ್ ಸಂಘರ್ಷದ ಸಂದರ್ಭದಲ್ಲಿ ಮಂಡ್ಯದ ಕಾಲೇಜಿನಲ್ಲಿ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದ ಮಂಡ್ಯ ಮುಸ್ಕಾನ್ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿರುವ ಅಲ್ ಜವಾಹಿರಿ, ಸಾಹಿತ್ಯವೊಂದನ್ನು ರಚಿಸಿ, ಮುಸ್ಕಾನ್ ಭಾರತದ ಉದಾತ್ತ ಮಹಿಳೆ, ಭಾರತದ ದೈರ್ಯಶಾಲಿ ಮಹಿಳೆ ಎಂದು ಕೊಂಡಾಡಿದ್ದಾನೆ.

Home add -Advt

ಈ ಕುರಿತು 9 ನಿಮಿಷಗಳ ವಿಡಿಯೋ ಬಿಡುಗಡೆ ಮಾಡಿರುವ ಅಲ್ ಜವಾಹಿರಿ, ಒಬ್ಬ ಸಹೋದರಿಯ ನಡೆಯಿಂದ ಹಾಗೂ ಆಕೆಯ ತಕ್ಬೀರ್ ಕೂಗಿನಿಂದ ಮನದುಂಬಿದೆ ಹೇಳಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಭಾರಿ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.

ಉರ್ದು ಮಾತನಾಡಿಲ್ಲ ಎಂದು ಕೊಂದ ಕಿರಾತಕರು; ನ್ಯೂಸ್ ಕ್ಲಿಪ್ ಬಗ್ಗೆ ಸತ್ಯ ಸಂಗತಿಗಳು

Related Articles

Back to top button