Kannada NewsPoliticsWorld

*ರಷ್ಯಾದ ತೈಲ ಹಡಗು ‘ವಿರಾಟ್’ ಮೇಲೆ ಉಕ್ರೇನ್ ಡ್ರೋನ್‌ ದಾಳಿ*

ಪ್ರಗತಿವಾಹಿನಿ ಸುದ್ದಿ: ರಾಷ್ಯಾ- ಉಕ್ರೇನ್ ಯುದ್ಧ ಆರಂಭವಾಗಿ ವರ್ಷಗಳೆ ಕಳೆಯುತ್ತಿವೆ. ಆದರೂ ಸದ್ಯಕ್ಕೆ ಯುದ್ದ ಮುಗಿಯುವ ಲಕ್ಷಣ ಕಾಣುತ್ತಿಲ್ಲ.‌ ಇದೀಗ ರಷ್ಯಾದ ತೈಲ ಹಡಗು ‘ವಿರಾಟ್’ ಮೇಲೆ ಉಕ್ರೇನ್ ಡ್ರೋನ್‌ ದಾಳಿ ನಡೆಸಿದೆ. 

ರಷ್ಯಾ ಉಕ್ರೇನ್ ಯುದ್ಧ ಆರಂಭವಾಗಿ ಮೂರುವರೆ ವರ್ಷಗಳೇ ಕಳೆದರೂ ಉಭಯ ರಾಷ್ಟ್ರಗಳ ನಡುವೆ ಇನ್ನೂ ಶಾಂತಿ ನೆಲೆಸಿಲ್ಲ. ಶಾಂತಿ ಒಪ್ಪಂದದ ಮಾತುಕತೆ ನಡೆದರೂ ಮತ್ತೆ ಮತ್ತೆ ಪರಸ್ಪರ ದಾಳಿಗಳು ನಡೆಯುತ್ತಲೇ ಇದೆ. ಉಕ್ರೇನ್ ಮಾಡಿರುವ ಡ್ರೋಣ ದಾಳಿಯಿಂದ ರಷ್ಯಾ ಮತ್ತಷ್ಟು ಕೆರಳಿಸಿದೆ.

Home add -Advt

ಶನಿವಾರ ಕಪ್ಪು ಸಮುದ್ರದಲ್ಲಿ ಉಕ್ರೇನ್ ಹಾರಿಸಿದ ನೀರೊಳಗಿನ ಮಾನವರಹಿತ ಡೋನ್ ರಷ್ಯಾದ ತೈಲ ಟ್ಯಾಂಕರ್ ‘ವಿರಾಟ್’ ಅನ್ನು ಡಿಕ್ಕಿ ಹೊಡೆದಿದೆ. ಶುಕ್ರವಾರವೂ ಅದೇ ಹಡಗು ಸ್ಫೋಟಗಳಿಗೆ ಒಳಗಾಗಿತ್ತು. ರಷ್ಯಾದ ನೆರಳು ನೌಕಾಪಡೆ ಎಂದೇ ಕರೆಯಲ್ಪಡುವ ಈ ಹಡಗಿಗೆ ಡೋನ್ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದ್ದು, ಉಕ್ರೇನ್ ಔಪಚಾರಿಕವಾಗಿ ದಾಳಿಯನ್ನು ನಡೆಸಿದ್ದಾಗಿ ಹೇಳಿಕೊಂಡಿದೆ.

ವಿರಾಟ್ ಮತ್ತು ಇನ್ನೊಂದು ಹಡಗಾದ ‘ಕೈರೋ’ ಸಿಬ್ಬಂದಿ ಡೋನ್ ದಾಳಿಯನ್ನು ವರದಿ ಮಾಡುವ ಓಪನ್-ಫ್ರೀಕ್ವೆನ್ಸಿ ರೇಡಿಯೋ ಡಿಸೈಸ್ ಕರೆಯನ್ನು ನೀಡಿದ್ದರು. ಕರೆಯ ವೀಡಿಯೊ ರೆಕಾರ್ಡಿಂಗ್‌ನಲ್ಲಿ ಸಿಬ್ಬಂದಿಯೊಬ್ಬರು ಇದು ವಿರಾಟ್. ಸಹಾಯ ಬೇಕು, ಡೋನ್ ದಾಳಿ, ಮೇಡೇ” ಎಂದು ಕೇಳಿಸಿಕೊಂಡಿದೆ.

ಸದ್ಯ ಹಡಗಿಗೆ ಸಣ್ಣಪುಟ್ಟ ಹಾನಿಯಾಗಿದ್ದರೂ, ವಿರಾಟ್ ಸ್ಥಿರವಾಗಿದೆ ಮತ್ತು ಎಲ್ಲಾ ಸಿಬ್ಬಂದಿ ಸುರಕ್ಷಿತರಾಗಿದ್ದಾರೆ ಮತ್ತು ಆರೋಗ್ಯವಾಗಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಘಟನೆಯ ಬಗ್ಗೆ ರಷ್ಯಾ ತಕ್ಷಣದ ಪ್ರತಿಕ್ರಿಯೆಯನ್ನು ನೀಡಿಲ್ಲ.

Related Articles

Back to top button