Latest

*ಭೀಕರ ಅಪಘಾತ; ಕರ್ತವ್ಯದಲ್ಲಿದ್ದ PSI ಸ್ಥಳದಲ್ಲೇ ದುರ್ಮರಣ*

ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ಭೀಕರ ಅಪಘಾತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿ ಎಸ್ ಐ ಓರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಹುಬ್ಬಳ್ಳಿಯ ಕಿರೇಸೂರು ಗ್ರಾಮದ ಬಳಿ ನಡೆದಿದೆ.

ಮಲ್ಲಿಕಾರ್ಜುನ ಕುಲಕರ್ಣಿ (40) ಮೃತ ಪಿಎಸ್ ಐ. ಮಲ್ಲಿಕಾರ್ಜುನ ಅವರು ಅಮೀನಗಢ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

Home add -Advt

ಮಲ್ಲಿಕಾರ್ಜುನ ಕುಲಕರ್ಣಿ ಚಲಿಸುತ್ತಿದ್ದ ಕಾರು ಹುಬ್ಬಳ್ಳಿಯ ಕಿರೇಸೂರ ಗ್ರಾಮದ ಬಳಿ ಬರುತಿದ್ದಂತೆ ನಿಯಂತ್ರಣ ತಪ್ಪಿ ಸೇತುವೆ ಡಿಕ್ಕಿ ಹೊಡೆದಿದೆ. ಅಪಘತದ ಭೀಕರತೆಗೆ ಕಾರಿನಲ್ಲಿದ್ದ ಪಿಎಸ್ ಐ ಮಲ್ಲಿಕಾರ್ಜುನ ಕುಲಕರ್ಣಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಸ್ಥಳಕ್ಕೆ ನವಲಗುಂದ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

https://pragati.taskdun.com/vidhanasabha-electioncongress-guaranteeelection-manifestopriyanka-gandhi/


Related Articles

Back to top button