CrimeKannada NewsKarnataka NewsLatest

*ಮತ್ತೊಂದು ಲವ್ ಜಿಹಾದ್ ಪ್ರಕರಣ: ಮುಸ್ಲಿಂ ಯುವಕನ ಮೊಬೈಲ್ ನಲ್ಲಿ ಹಿಂದೂ ಯುವತಿಯರ ಅಶ್ಲೀಲ ಫೋಟೊ, ವಿಡಿಯೋಗಳು ಪತ್ತೆ*

ಪ್ರಗತಿವಾಹಿನಿ ಸುದ್ದಿ: ಹುಬ್ಬಳ್ಳಿಯಲ್ಲಿ ಎರಡು ಲವ್ ಜಿಹಾದ್ ಪ್ರಕರಣಗಳು ಭಾರಿ ಚರ್ಚೆಯಲ್ಲಿರುವಾಗಲೇ ಅತ್ತ ಕೊಪ್ಪಳದಲ್ಲಿಯೂ ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದೆ. ಹಿಂದೂ ಯುವತಿಯರನ್ನು ಪರಿಚಯಿಸಿಕೊಂಡು ಸ್ನೇಹ ಬೆಳೆಸುತ್ತಿದ್ದ ಮುಸ್ಲಿಂ ಯುವಕನೊಬ್ಬನ ವಿರುದ್ಧ ಲವ್ ಜಿಹಾದ್ ಆರೋಪ ಕೇಳಿಬಂದಿದ್ದು, ಯುವಕನ ಮೊಬೈಲ್ ನಲ್ಲಿ ಯುವತಿಯರ ಅಶೀಲ ಫೋಟೋ, ವಿಡಿಯೋಗಳು ಪತ್ತೆಯಾಗಿವೆ.

ಕೊಪ್ಪಳ ಜಿಲ್ಲೆಯ ಕಂಪ್ಲಿ ಗ್ರಾಮದ ಮುಸ್ಲಿಂ ಯುವಕ ಮುಸ್ತಫಾ ಎಂಬಾತನ ವಿರುದ್ಧ ಆರೋಪ ಕೇಳಿಬಂದಿದೆ. ಈತನ ಬಳಿ ೧೬ಕ್ಕೂ ಹೆಚ್ಚು ಹಿಂದೂ ಯುವತಿಯರ ಜೊತೆಗಿನ ಫೋಟೋಗಳು ಪತ್ತೆಯಾಗಿವೆ. ಪ್ರೀತಿ-ಪ್ರೇಮದ ಹೆಸರಲ್ಲಿ ಹಿಂದೂ ಯುವತಿಯರನ್ನೇ ಟಾರ್ಗೆಟ್ ಮಾಡಿ ಅವರಿಗೆ ಮಾದಕ ವಸ್ತಿಗಳು, ಗಾಂಜಾ ನೀಡಿ ಅಶೀಲ ಫೋಟೋ, ವಿಡಿಯೋಗಳನ್ನು ತೆಗೆದಿಟ್ಟುಕೊಳ್ಳುತ್ತಿದ್ದ ಎನ್ನಲಾಗಿದೆ.

ಈತ ಹಿಂದೂ ಯುವತಿಯರನ್ನು ಟರಗೆಟ್ ಮಾಡಿ ಲವ್ ಜಿಹಾದ್ ನಡೆಸುತ್ತಿದ್ದಾನೆ ಎಂದು ಆರೋಪಿಸಿ ಹಿಂದೂ ಸಂಘಟನೆಗಳು ಕೊಪ್ಪಳ ನಗರ ಠಾಣೆಯಲ್ಲಿ ದೂರು ನೀಡಿವೆ.

ಮುಸ್ತಫಾ ಖಾದ್ರಿ ಕೊಲ್ಲದ ಜಿಲ್ಲಾಸ್ಪತ್ತ್ರೆ ಆವರಣದಲ್ಲಿ ವಿದ್ಯಾರ್ಥಿನಿಯೊಂದಿಗೆ ಸಂಶಯಾಸ್ಪದ ರೀತಿಯಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದ. ಸ್ಥಳಕ್ಕೆ ತೆರಳಿ ಯುವಕನ ಬಳಿ ಇದ್ದ ಮೊಬೈಲ್ ಪರಿಶೀಲಿಸಿದಾಗ ಒಂದು ಮೊಬೈಲ್ ನಲ್ಲಿ ಮೂರು ಸಾವಿರ ಫೋಟೊಗಳು, ಇನ್ನೊಂದು ಮೊಬೈಲ್ ನಲ್ಲಿ ನಾಲ್ಕುಯ್ ಸಾವಿರ ಫೋಟೋ, ವಿಡಿಯೋಗಳು ಪತ್ತೆಯಾಗಿವೆ ಎಂದು ವಿಸ್ಜ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಡಾ.ಸಂಗಮೇಶ್ ಹಿರೇಮಠ ದೂರು ನೀಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button