Latest

ಹೆಲ್ಮೆಟ್ ಕಡ್ಡಾಯ ಸಡಿಲಿಸಿಲ್ಲ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

Home add -Advt

ಹೆಲ್ಮೆಟ್ ಕಡ್ಡಾಯ ಸಡಿಲಿಸುವ ಸಂಬಂಧ ಬಂದ ಸರ್ಕ್ಯುಲರ್ ಒಂದು ಗೊಂದಲಕ್ಕೆ ಕಾರಣವಾಗಿದ್ದು, ಬೆಳಗಾವಿಯಲ್ಲಿ ಹೆಲ್ಮೆಟ್ ಕಡ್ಡಾಯ ಹಿಂತೆಗೆದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಸಿಲಿನ ಬೇಗೆ ಹೆಚ್ಚಿರುವುದರಿಂದ ಉತ್ತರ ಕರ್ನಾಟಕದ 9 ಜಿಲ್ಲೆಗಳಲ್ಲಿ ಹೆಲ್ಮೆಟ್ ಕಡ್ಡಾಯ ಸಡಿಲಿಸಬೇಕೆಂದು ನೀಡಲಾಗಿದ್ದ ಮನವಿ ಆಧರಿಸಿ ರಾಜ್ಯ ಸರಕಾರ ಬರೆದಿರುವ ಪತ್ರ ಗೊಂದಲಕ್ಕೆ ಕಾರಣವಾಗಿದೆ.

ಆದರೆ ಅದರಲ್ಲಿ, ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಿ ಎಂದಷ್ಟೆ ಇದೆ. ಹೆಲ್ಮೆಟ್ ಕಡ್ಡಾಯ ಸಡಿಲಿಸಿರುವ ಉಲ್ಲೇಖವಿಲ್ಲ.

ನ್ಯಾಯಾಲಯದ ಆದೇಶದ ಮೇರೆಗೆ ಕಡ್ಡಾಯಗೊಳಿಸಲಾಗಿರುವ ಹೆಲ್ಮೆಟ್ ಕಡ್ಡಾಯ ಸಡಿಲಿಸಲು ಪೊಲೀಸರಿಗೂ ಅಧಿಕಾರವಿಲ್ಲ.

ಬೆಳಗಾವಿಯಲ್ಲಿ ಹೆಲ್ಮೆಟ್ ಕಡ್ಡಾಯ ಮುಂದುವರಿಯಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Related Articles

Back to top button