ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ಮಹಾತ್ಮ ಗಾಂಧಿಯವರ 150ನೇ ಜನ್ಮ ದಿನ ಆಚರಣೆ ನೆನಪಿಗಾಗಿ ರಾಜ್ಯದ ಮಹಾನಗರ ಪಾಲಿಕೆಗಳ ಅಭಿವೃದ್ಧಿಗೆ ರಾಜ್ಯ ಸರಕಾರ ವಿಶೇಷ ಅನುದಾನ ಘೋಷಿಸಿದೆ.
ಈ ಯೋಜನೆಯ ಅಡಿಯಲ್ಲಿ ಕೆಲವು ಮಹಾನಗರ ಪಾಲಿಕೆ 150 ಕೋಟಿ ರೂ. ಹಾಗೂ ಇನ್ನು ಕೆಲವು ಮಹಾನಗರಗಳಿಗೆ 125 ಕೋಟಿ ರೂ. ನೀಡಲಾಗುವುದು. ಈ ಯೋಜನೆಯಲ್ಲಿ ಬೆಳಗಾವಿ ಮಹಾನಗರಕ್ಕೆ 125 ಕೋಟಿ ರೂ. ದೊರೆಯಲಿದೆ.
ಬೆಂಗಳೂರು, ಮೈಸೂರು, ಕಲಬುರಗಿ ಹಾಗೂ ಬೆಳಗಾವಿಯಲ್ಲಿ ಭಾಷಾ ಕೌಶಲ್ಯ ಕೇಂದ್ರ ಸ್ಥಾಪಿಸಲು ನಿರ್ಧರಿಸಲಾಗಿದೆ. ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವನ್ನು ವಿಭಜಿಸಲು ಸರಕಾರ ನಿರ್ಧರಿಸಿದೆ.