Kannada NewsKarnataka NewsLatest

ಕೆವಿಜಿ ಬ್ಯಾಂಕ್ ಶಾಖೆಯಲ್ಲಿ ಕಳ್ಳತನ

ಪ್ರಗತಿವಾಹಿನಿ ಸುದ್ದಿ, ಖಾನಾಪುರ -ಖಾನಾಪುರ ತಾಲೂಕಿನ ಲಿಂಗನಮಠ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಕಳ್ಳತನವಾಗಿದೆ. ಇದರ ಮೊದಲು ಕೂಡಾ ಎರಡು ಬಾರಿ ಕಳ್ಳತನ ಜರುಗಿದಾದರೂ ಹೆಚ್ಚಿನ ಹಾನಿ ನಡೆದಿರಲಿಲ್ಲ. ಈ ಸಲ ಕಳ್ಳರು  ಸಂಪೂರ್ಣ ಜಾಗೃತಿಯಿಂದ  ಕೈಚಳಕ ತೋರಿಸಿದ್ದಾರೆ.
ಬ್ಯಾಂಕ್ ಎಡಬದಿಯಲ್ಲಿರುವ ಕಿಡಕಿಯನ್ನು ಗ್ಯಾಸ್ ಕಟ್ಟರ್ ನಿಂದ  ಕಟ್ ಮಾಡಿದ್ದಾರೆ. ಬ್ಯಾಂಕ್ ಒಳಗಡೆ ಇಳಿದು ಬ್ಯಾಂಕ್ ನಲ್ಲಿರುವ ಸಿಸಿ ಕ್ಯಾಮರಾ ಬೇರೆ ಕಡೆ ತಿರುಗಿಸಿದ್ದಾರೆ. ತದನಂತರ ಒಳ್ಳಗಡೆ ಇರುವ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ.  ಗ್ಯಾಸ್ ಕಟರ್ ಉಪಯೋಗಿಸಿ ಸೇಫ್ ಲಾಕರ್ ನಲ್ಲಿರುವ   ಕೀ ಗಳನ್ನು ಮುರಿದು ಅದರಲ್ಲಿದ್ದ  70,048/- ನಗದು ಹಣದೊಂದಿಗೆ ಸುಮಾರು 49.5 ತೊಲೆ ಬಂಗಾರ ಲಪ್ಟಾಯಿಸಿದ್ದಾರೆ.
ಈ ಬ್ಯಾಂಕ್ ಲಿಂಗನಮಠ ಗ್ರಾಮದ ಕೊನೆಯ ಹದ್ದಿಯಲ್ಲಿದೆ. ಗ್ರಾಮದ ಹೊರ ವಲಯದಲ್ಲಿ ಇದ್ದು, ಸೂಕ್ತ ಸೆಕ್ಯೂರಿಟಿ ವ್ಯವಸ್ಥೆ ಇಲ್ಲದಾಗಿದೆ. ಘಟನಾ ಸ್ಥಳಕ್ಕೆ ಖಾನಾಪುರ ಸಿಪಿಐ ಮೊತಿಲಾಲ್ ಪವಾರ್, ಖಾನಾಪುರ ಪಿಎಸ್ಐ ಬಸನಗೌಡ ಪಾಟೀಲ, ಹವಾಲ್ದಾರ್ ಆರ್.ಎಸ್.ಕಳ್ಳಿಮನಿ, ವಿಠ್ಠಲ ಚಿಚ್ಚಲಿ, ಪೇದೆಗಳಾದ ನಿಲಕಾಂತ ಚಂದರಗಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದು ಇದರ ಜೊತೆಗೆ ಶ್ವಾನ ದಳ ಕರೆಸಲಾಗಿತ್ತು. ನಂದಗಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
  https://youtu.be/J5Z7fMpzmxQ

Related Articles

Back to top button