Belagavi NewsBelgaum NewsKannada NewsKarnataka News

*ಮಹಿಳಾ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ ಯುವಕ: ಚನ್ನಮ್ಮ ವೃತ್ತದ ಬಳಿ ಘಟನೆ*

ಪ್ರಗತಿವಾಹಿನಿ ಸುದ್ದಿ: ಚಿಲ್ಲರೆ ಹಣದ ವಿಷಯವಾಗಿ ಮಹಿಳಾ ಕಂಡಕ್ಟರ್ ಮೇಲೆ ಯುವಕನೋರ್ವ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ ನಗರದ ಹೃದಯ ಭಾಗವಾದ ಚನ್ನಮ್ಮ ವೃತ್ತದ ಬಳಿ ನಡೆದಿದೆ.‌

ಬೆಳಗಾವಿ- ಹೊನಗಾ ನಗರ ಸಾರಿಗೆ ಬಸ್ ಕಂಡಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಕಂಡಕ್ಟರ್ ಜೊತೆಗೆ ಬಸ್ ನಲ್ಲಿ ಚಿಲ್ಲರೆ ಕೊಡುವ ವಿಚಾರದಲ್ಲಿ ಯುವಕ ಗಲಾಟೆ ನಡೆಸಿದ್ದಾನೆ.

Home add -Advt

ಯುವಕ ಯಮನಾಪೂರ ಗ್ರಾಮದಿಂದ ಬಸನಲ್ಲಿ ಸಂಚರಿಸಿದ್ದಾನೆ. ಅವ್ಯಾಚ್ಛ ಶಬ್ದಗಳಿಂದ ಬಸ್ ನಲ್ಲಿ ಯುವಕ ನಿಂದಿಸುವಾಗ ಯಾರಿಗೆ ಬೈಯುತ್ತಿರುವೆ? ಎಂದು ಕೇಳಿದ್ದಕ್ಕೆ ಕಪಾಳಮೋಕ್ಷ ಮಾಡಿದ್ದಾನೆ. ಯುವಕನ ಹಲ್ಲೆಯಿಂದ ಮನನೊಂದು ಮಹಿಳಾ ಕಂಡಕ್ಟರ್ ನಡು ರಸ್ತೆಯಲ್ಲಿ ಕಣ್ಣಿರು ಹಾಕಿದ್ದಾಳೆ.  ನಂತರ ಬಸ್ಸಿನಲ್ಲಿದ್ದ ಪ್ರಯಾಣಿಕರು ಸ್ಥಳೀಯ ಪೊಲೀಸರಿಗೆ ಯುವಕನನ್ನ ಒಪ್ಪಿಸಿದ್ದಾರೆ. ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Related Articles

Back to top button