Election NewsKannada NewsKarnataka NewsPolitics

ನನಗೆ ಎಕ್ಸಿಟ್‌ ಪೋಲ್‌  ಮೇಲೆ ನಂಬಿಕೆಯಿಲ್ಲ: ಡಿಸಿಎಂ ಡಿಕೆ ಶಿವಕುಮಾರ್‌  

ಪ್ರಗತಿವಾಹಿನಿ ಸುದ್ದಿ: ದೇಶದಲ್ಲಿ ಮತ್ತೆ ಎನ್ ಡಿ ಎ ಮೈತ್ರಿ ಕೂಟ ಅಧಿಕಾರಕ್ಕೆ ಬರುತ್ತೆ ಎಂದು ಎಕ್ಸಿಟ್ ಪೋಲ್ ನಲ್ಲಿ ಭಹಿರಂಗ ಆಗಿದ್ದು, ನನಗೆ ಯಾವುದೇ ಎಕ್ಸಿಟ್‌ ಪೋಲ್‌  ಮೇಲೆ ನಂಬಿಕೆಯಿಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌  ಹೇಳಿಕೆ ನೀಡಿದ್ದಾರೆ.

ಚುನಾವಣೋತ್ತರ ಸಮೀಕ್ಷೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷ 2 ಅಂಕಿ ದಾಟುತ್ತದೆ. ಈ ಚುನಾವಣಾ ಸಮೀಕ್ಷೆ ಬಗ್ಗೆ ನನಗೆ ವಿಶ್ವಾಸವಿಲ್ಲ ಎಂದು ಹೇಳಿದರು.

Home add -Advt

ಕೆಲವರ ಅಭಿಪ್ರಾಯ ಮಾತ್ರ ಸಂಗ್ರಹಿಸಿರುತ್ತಾರೆ ಅಷ್ಟೆ. ಲೋಕಸಭೆಯಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರುತ್ತದೆ. ಕಾಂಗ್ರೆಸ್‌ಗೆ ಈ ಚುನಾವಣೋತ್ತರ ಸಮೀಕ್ಷೆಗಳು ಭಾರಿ ನಿರಾಸೆ ಮೂಡಿಸಿದ್ದು, ಫಲಿತಾಂಶ ಬಂದ ಬಳಿಕ ಸ್ಪಷ್ಟ ಮಾಹಿತಿ ದೊರೆಯಲಿದೆ ಎಂದರು.

Related Articles

Back to top button