Belagavi NewsBelgaum NewsKannada NewsKarnataka NewsLatest

*ಇಂದು ಅಧಿವೇಶನಕ್ಕೆ ಕೊನೆಯ ದಿನ: ಸರ್ಕಾರಕ್ಕೆ ಪ್ರತಿಭಟನೆಯ ಬಿಸಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯಲ್ಲಿ ನಡೆಯುತ್ತಿರವ ಚಳಿಗಾಲದ ಅಧಿವೇಶನಕ್ಕೆ ಇಂದು ಕೊನೆಯ ದಿನವಾಗಲಿದ್ದು, ಪ್ರತಿಭಟನೆಗಳ ಕಾವು ಹೆಚ್ಚಾಗಲಿದೆ‌.

ಸುವರ್ಣ ವಿಧಾನಸೌಧದ ಪಕ್ಕದ ಸುವರ್ಣ ಗಾರ್ಡನ್ ಬಳಿ 5 ಸಂಘಟನೆಗಳಿಂದ ಹೋರಾಟ ನಡೆಯಲಿದೆ.‌

Home add -Advt

ಮೀಸಲಾತಿಗೆ ಒತ್ತಾಯಿಸಿ ಪರಿಶಿಷ್ಟ ಜಾತಿಯ ಸೂಕ್ಷ್ಮ, ಅತೀ ಸೂಕ್ಷ್ಮ ಅಲೆಮಾರಿ ಸಮುದಾಯಗಳ ಒಳ ಮೀಸಲಾತಿ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಯಲಿದೆ.‌ ಹಕ್ಕು ಪತ್ರಕ್ಕಾಗಿ ಒತ್ತಾಯಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯಿಂದ ಪ್ರತಿಭಟನೆ, ಉತ್ತರ ಕರ್ನಾಟಕ ಅಭಿವೃದ್ಧಿ ಗೆ ಆಗ್ರಹಿಸಿ ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನಾದಿಂದ ಪ್ರತಿಭಟನೆ,  ಸೇವೆ ಖಾಯಂಗೊಳಿಸಲು ಒತ್ತಾಯಿಸಿ ಕರ್ನಾಟಕ ಗ್ರಾಮ ವಿದ್ಯುತ್ ಪ್ರತಿನಿಧಿಗಳ  ಸಂಘದಿಂದ ಹೋರಾಟ ಹಾಗೂ ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಒತ್ತಾಯಿಸಿ ನಾಗರಾಜ್ ಕಲಕುಟಕರ ಎಂಬಾತನಿಂದ ಏಕಾಂಗಿಯಾಗಿ ಪ್ರತಿಭಟನೆ ನಡೆಯಲಿದೆ.

Related Articles

Back to top button