
ಪ್ರಗತಿವಾಹಿನಿ ಸುದ್ದಿ; ಮಂಡ್ಯ: ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳುವ ಮೂಲಕ ವರುಣಾ ಹಾಲಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅಚ್ಚರಿ ಮೂಡಿಸಿದ್ದಾರೆ.
ಮಂಡ್ಯದಲ್ಲಿ ಸುದ್ದಿಗರರೊಂದಿಗೆ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ವರುನಾ ಅಥವಾ ಬೇರೆ ಯಾವುದೇ ಕ್ಷೇತ್ರಗಳಿಂದಲೂ ನಾನು ಚುನಾವಣೆಯಲ್ಲಿ ಸ್ಪರ್ಧಿಸಲ್ಲ. ತಂದೆಯವರ ಪರವಾಗಿ ನಾನು ಕಳೆದ ಜನವರಿಯಿಂದಲೇ ಪ್ರಚಾರ ಶುರುಮಾಡಿದ್ದೇನೆ. ವರುಣಾ ಕ್ಷೇತ್ರ ಯಾವ ಒಬ್ಬ ವ್ಯಕ್ತಿಗೆ ಸೇರೊದ್ದಲ್ಲ. ಅದು ಆ ಕ್ಷೇತ್ರದ ಮತದಾರರಿಗೆ ಸೇರಿದ್ದು ಎಂದಿದ್ದಾರೆ.
ತಂದೆಯವರ ಕೊನೇ ಚುನವಣೆ ಹಾಗಾಗಿ ಅವರು ವರುಣಾದಲ್ಲಿ ನಿಲ್ಲಬೇಕು ಎಂಬುದು ಜನರ ಆಶಯ ಎಂದರು. ಈ ಮೂಲಕ ಯತೀಂದ್ರ ಸಿದ್ದರಾಮಯ್ಯ ಚುನಾವಣಾ ಅಖಾಡದಿಂದಲೇ ಹಿಂದೆ ಸರಿಯುವುದಾಗಿ ಸ್ಪಷ್ಟಪಡಿಸಿದ್ದಾರೆ.