Karnataka NewsLatest

*ಮುನಿರತ್ನ ಅರೆಸ್ಟ್ ಕೇಸ್: ಖುದ್ದು ಡಿಸಿಪಿ ವಿಚಾರಣೆ*

ಪ್ರಗತಿವಾಹಿನಿ ಸುದ್ದಿ: ಜೀವ ಬೆದರಿಕೆ, ಜಾತಿ ನಿಂದನೆ ಪ್ರಕರಣದಲ್ಲಿ ಬಂಧಿತರಾಗಿರುವ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಖುದ್ದು ಡಿಸಿಪಿ ಶೇಖರ್ ಟೆಕ್ಕಣ್ಣವರ್ ವಿಚಾರಣೆ ನಡೆಸುತ್ತಿದ್ದಾರೆ.

ಕಳೆದ ಎರಡು ಗಂಟೆಯಿಂದ ಇಬ್ಬರು ಎಸಿಪಿ ಹಗೂ ಓರ್ವ ಡಿಸಿಪಿ ಸಮ್ಮುಖದಲ್ಲಿ ಮುನಿರತ್ನ ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆಯ ಪ್ರತಿ ಹಂತವನ್ನು ಪೊಲೀಸರು ವಿಡಿಯೋ ರೆಕಾರ್ಡ್ ಮಾಡುತ್ತಿದ್ದಾರೆ.

Home add -Advt

ನಾಲ್ಕು ತಿಂಗಳ ಹಿಂದೆ ದೂರುದಾರನ ಜೊತೆ ನಾನು ಮಾತನಾಡಿದ್ದೆ. ಅದಾದ ಬಳಿಕ ನಾನು ಮಾತನಾಡಿಲ್ಲ. ಇದೆಲ್ಲವೂ ರಾಜಕೀಯ ಷಡ್ಯಂತ್ರ. ನನಗೇನೂ ಗೊತ್ತಿಲ್ಲ ಎಂದು ಮುನಿರತ್ನ ತಿಳಿಸಿದ್ದಾರೆ.

ಮುಡಾ ಹಗರಣ ಡೈವರ್ಟ್ ಮಾಡಲು ನನ್ನನ್ನು ಬಲಿಪಶು ಮಾಡುತ್ತಿದ್ದಾರೆ. ನಾನು ಯಾರನ್ನೂ ಯಾವತ್ತೂ ಬೈದಿಲ್ಲ. ಹಲ್ಲೆಯನ್ನೂ ಮಾಡಿಲ್ಲ. ವೈರಲ್ ಆಗಿರುವ ಆಡಿಯೋ ನನ್ನದಲ್ಲ. ನಾನು ಯಾರ ಜೊತೆಯೂ ಮಾತನಾಡಿಲ್ಲ ಎಂದು ವಿಚಾರಣೆ ವೇಳೆ ಮುನಿರತ್ನ ಹೇಳಿದ್ದಾರೆ ಎನ್ನಲಾಗಿದೆ.


Related Articles

Back to top button