Latest

ಡ್ರಗ್ಸ್ ಕಿಂಗ್ ಪಿನ್ ಮನೆಯಲ್ಲಿ ಪೊಲೀಸ್ ಸಮವಸ್ತ್ರ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ನಂಟು ಪ್ರಕರಣ ಸಂಬಂಧ ಸಿಸಿಬಿಯಿಂದ ಬಂಧನಕ್ಕೀಡಾಗಿರುವ ಡ್ರಗ್ಸ್ ಪೆಡ್ಲರ್ ವಿರೇನ್ ಖನ್ನಾ ನಿವಾಸದಲ್ಲಿ ಪೊಲೀಸ್ ಸಮವಸ್ತ್ರ ಪತ್ತೆಯಾಗಿದ್ದು ಹಲವು ಅನುಮಾನಕ್ಕೆ ಕಾರಣವಾಗಿದೆ.

ಈ ಕುರಿತು ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ಮಾಹಿತಿ ನೀಡಿದ್ದು, ಡ್ರಗ್ಸ್ ಪ್ರಕರಣದ ಆರೋಪಿ ವಿರೇನ್ ಖನ್ನಾ ಅವರ ನಿವಾಸದ ಮೇಲೆ ಇಂದು ಸಿಸಿಬಿ ದಾಳಿ ನಡೆಸಿದೆ. ಈ ದಾಳಿ ವೇಳೆ ಅವರ ಮನೆಯಲ್ಲಿ ನಡೆಸಿದ ಶೋಧ ಕಾರ್ಯದ ವೇಳೆ ನಕಲಿ ಪೊಲೀಸ್ ಸಮವಸ್ತ್ರವೊಂದು ಸಿಕ್ಕಿದೆ. ಇನ್ನೂ ಸಾಕಷ್ತು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.

Home add -Advt

ಖನ್ನಾ ಮನೆಯಲ್ಲಿ ಸಿಕ್ಕ ಸಮವಸ್ತ್ರ ಹಾಗೂ ದೊರೆತ ವಸ್ತುಗಳ ಬಗ್ಗೆ ಸಾಕಷ್ಟು ತನಿಖೆಯಾಗಬೇಕಿದೆ. ಸಿಸಿಬಿ ಅಧಿಕಾರಿಗಳ ತನಿಖೆ ಸರಿಯಾದ ರೀತಿಯಲ್ಲಿ ಸಾಗಿದೆ ಎಂದು ತಿಳಿಸಿದರು.

Related Articles

Back to top button