Latest

ಕೊಂಬಿನ ಕುದುರೆ ಏರಿದ ಉಪ್ಪಿ; ಬೆರಗು ಮೂಡಿಸಿದ ರಿಯಲ್ ಸ್ಟಾರ್ ನಿರ್ದೇಶದ ಹೊಸ ಚಿತ್ರದ ಪೋಸ್ಟರ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಮತ್ತೆ ನಿರ್ದೇಶನಕ್ಕೆ ಕಾಲಿಟ್ಟಿದ್ದಾರೆ. ತಮ್ಮದೇ ಅಭಿನಯ ಹಾಗೂ ನಿರ್ದೇಶನದ ಹೊಸ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ನ್ನು ಉಪೇಂದ್ರ ಬಿಡುಗಡೆ ಮಾಡಿದ್ದು, ವಿಭಿನ್ನ ಶೀರ್ಷಿಕೆ, ವಿಚಿತ್ರ ಚಿಹ್ನೆ ಅಭಿಮಾನಿಗಳನ್ನು ಬೆರಗುಗೊಳಿಸಿದೆ.

ಪೋಸ್ಟರ್ ನಲ್ಲಿ ಒಂದೆಡೆ ಕೊಂಬು ಇರುವ ಕುದುರೆ ಏರಿ ಬರುತ್ತಿರುವ ಉಪೇಂದ್ರ ಲುಕ್ ಗಮನ ಸೆಳೆಯುತ್ತಿದ್ದರೆ, ಮತ್ತೊಂದೆಡೆ ಕುದುರೆ ಲಾಳ, ಬೆಂಕಿ, ಉಪಗ್ರಹ, ಇಂಕು, ಕುದುರೆ, ಕೊಂಬು, ಉಪ್ಪಿ ವಿಚಿತ್ರ ವೇಷ ಕೂಡ ಗಮನ ಸೆಳೆಯುತ್ತಿದೆ.

Home add -Advt

ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಚಿತ್ರದ ಫಸ್ಟ್​ ಲುಕ್​ ಪೋಸ್ಟರ್ ಬಿಡುಗಡೆ ಮಾಡಿರುವ ಉಪೇಂದ್ರ, ಚಿತ್ರರಂಗದಲ್ಲಿ ಉಪೇಂದ್ರ ಅನ್ನೊ ಕಥೆ ಮಾಡಿ 33 ವರ್ಷದ ಚಿತ್ರಕಥೆಯಲ್ಲಿ ಸಂಭಾಷಣೆ ಹೇಳಿಸಿ, ಶಿಳ್ಳೆ ಚಪ್ಪಾಳೆಯಲ್ಲೇ ನಿರ್ದೇಶನ ಮಾಡಿದ ಎಲ್ಲಾ ಅಭಿಮಾನಿ ಪ್ರಜಾ ಪ್ರಭುಗಳಿಗೆ ಈ ಚಿತ್ರ ಅರ್ಪಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

Related Articles

Back to top button