Belagavi NewsBelgaum NewsKarnataka NewsLatest

*ಸವದತ್ತಿ ಜಾತ್ರೆಯಲ್ಲಿ ಪಾಲ್ಗೊಂಡ ಚನ್ನರಾಜ ಹಟ್ಟಿಹೊಳಿ*

ಪ್ರಗತಿವಾಹಿನಿ ಸುದ್ದಿ: ಸವದತ್ತಿ: ಸವದತ್ತಿ ಪಟ್ಟಣದಲ್ಲಿ 44 ವರ್ಷಗಳ ಬಳಿಕ ನಡೆಯುತ್ತಿರುವ ಶ್ರೀ ಗ್ರಾಮದೇವಿ ಜಾತ್ರಾ ಮಹೋತ್ಸವದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಸೋಮವಾರ ಪಾಲ್ಗೊಂಡು, ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

Home add -Advt


ಅತ್ಯಂತ ಭಕ್ತಿ, ಸಡಗರದಿಂದ ಗ್ರಾಮದೇವಿಯ ಜಾತ್ರೆ ನಡೆಯುತ್ತಿದ್ದು, ಲಕ್ಷಾಂತರ ಭಕ್ತರು ಪಾಲ್ಗೊಂಡಿದ್ದಾರೆ. ಗ್ರಾಮ ದೇವಿ ಸವದತ್ತಿ ಪಟ್ಟಣಕ್ಕೆ ಹಾಗೂ ಭಕ್ತರಿಗೆ ಸನ್ಮಂಗಳವನ್ನುಂಟು ಮಾಡಲಿ, ಮಳೆ, ಬೆಳೆ ಉತ್ತಮವಾಗಿ ಜನರು ಸುಖದಿಂದ ಬಾಳುವಂತಾಗಲಿ ಎಂದು ಚನ್ನರಾಜ ಹಟ್ಟಿಹೊಳಿ ಪ್ರಾರ್ಥಿಸಿದರು.

ಈ ವೇಳೆ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Related Articles

Back to top button