Belagavi NewsBelgaum NewsElection NewsKannada NewsKarnataka NewsNationalPolitics

*ಚನ್ನಪಟ್ಟಣ: ಭವಿಷ್ಯ ನುಡಿದ ಜ್ಯೋತಿಷಿ*

ಪ್ರಗತಿವಾಹಿನಿ ಸುದ್ದಿ: ರಾಜ್ಯದ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ಮುಗಿದಿದ್ದು, ಫಲಿತಾಂಶಕ್ಕೆ ಎದುರು ನೋಡುತ್ತಿದ್ದಾರೆ. ನಡುವೆ ಚನ್ನಪಟ್ಟಣ ಉಪಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲುವು ಸಾಧಿಸಲಿದ್ದಾರೆ ಎಂದು ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ.

ತುಮಕೂರು ತಾಲೂಕಿನ ಚಿನಗ ಗ್ರಾಮದಲ್ಲಿರುವ ಶ್ರೀ ಮೂಕಾಂಬಿಕಾ ಹಾಗೂ ಸುಬ್ರಹ್ಮಣ್ಯ ಕ್ಷೇತ್ರದ ಧರ್ಮದರ್ಶಿ ಡಾ. ಲಕ್ಷ್ಮಿಕಾಂತ್ ಆಚಾರ್ಯ ಅವರು ಫಲಿತಾಂಶಕ್ಕೂ ಮುನ್ನವೇ ಈ ರೀತಿ ಹೇಳಿದ್ದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಶ್ರೀ ಮೂಕಾಂಬಿಕಾ ದೇವಿಯ ಅನುಗ್ರಹದಂತೆ ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಜಯಗಳಿಸುತ್ತಾರೆ. ಮತದಾನಕ್ಕೂ ಮುನ್ನವೇ ಭವಿಷ್ಯ ನುಡಿಯಲಾಗಿತ್ತು, ಮತದಾನದ ನಂತರವೂ ಭವಿಷ್ಯ ಸ್ಪಷ್ಟವಾಗಿದ್ದು ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಜಯಗಳಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

Home add -Advt

Related Articles

Back to top button