Karnataka News

*ವಿಂಗ್ ಕಮಾಂಡರ್ ಅಟ್ಟಹಾಸ: ಬೈಕ್ ಸವಾರನ ಮೇಲೆ ಹಲ್ಲೆ; FIR ದಾಖಲು*

ಪ್ರಗತಿವಾಹಿನಿ ಸುದ್ದಿ: ವಿಂಗ್ ಕಮಾಂಡರ್ ಓರ್ವ ತಾನೇ ಬೈಕ್ ಸವಾರನ ಮೇಲೆ ಹಲ್ಲೆ ನಡೆಸಿ, ಆತನನ್ನು ಕಾಲಿನಿಂದ ಒದ್ದು ಬೀಳಿಸಿ ಅಟ್ಟಹಾಸ ಮೆರೆದಿದ್ದಲ್ಲದೇ, ಬೈಕ್ ಸವಾರನ ವಿರುದ್ಧವೇ ಸುಳ್ಳು ಆರೋಪ ಮಾಡಿ ತನ್ನ ಮೇಲೆ ಬೈಕ್ ಸವಾರ ಹಲ್ಲೆ ನಡೆಸಿದ್ದಾನೆ. ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲ ಎಂದು ವಿಡಿಯೋ ಮಾಡಿ ನಾಟಕ ಮಾಡಿದ್ದ ವಿಂಗ್ ಕಮಾಂಡರ್ ವಿರುದ್ಧ ಪ್ರಕರಣ ದಾಖಲಾಗಿದೆ.

ಏರ್ ಪೋರ್ಟ್ ಗೆ ತೆರಳುತ್ತಿದ್ದ ತನ್ನ ಮೇಲೆ ಬೈಕ್ ಸವಾರ ಹಲ್ಲೆ ನಡೆಸಿದ್ದಾನೆ ಎಂದು ಸುಳ್ಳು ಕಥೆ ಕಟ್ಟಿ ರಕ್ತಸೋರುತ್ತಿದ್ದ ವಿಡಿಯೋ ಹಾಗೂ ಬಳಿಕ ತನ್ನ ಹಣೆಗೆ ಸರ್ಜರಿ ಆಗಿದೆ ಎಂದು ಮತ್ತೊಂದು ವಿಡಿಯೋ ಮಾಡಿ ಡ್ರಾಮಾ ಮಾಡಿದ್ದ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

Home add -Advt

ಬೈಕ್ ಸವಾರ ವಿಕಾಸ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಬೈಯ್ಯಪ್ಪನಹಳ್ಳಿ ಠಾಣೆಯಲ್ಲಿ ಶಿಲಾದಿತ್ಯ ಬೋಸ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಕೊಲೆ ಯತ್ನ, ಮಾರಣಾಂತಿಕ ಹಲ್ಲೆ, ಶಾಂತಿ ಭಂಗ, ಬಲವಾಗಿ ವಸ್ತುಗಳನ್ನು ಉದ್ದೇಶಪೂರ್ವಕವಾಗಿ ಕಿತ್ತುಕೊಳ್ಳುವುದು ಸೇರಿದಂತೆ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಕೇಸ್ ದಾಖಲಾಗಿದೆ.

ಪಶ್ಚಿಮ ಬಂಗಾಳ ಮೂಲದ ಶಿಲಾದಿತ್ಯ ನಡುರಸ್ತೆಯಲ್ಲಿ ತನ್ನ ಕಾರನ್ನು ಬೈಕ್ ಗೆ ಅಡ್ದಗಟ್ಟಿ ನಿಲ್ಲಿಸಿ ಬೈಕ್ ಸವಾರನನ್ನು ನೆಲಕ್ಕೆ ಬೀಳಿಸಿ ಬಳಿಕ ಆತನ ಮೇಲೆ ಮನಬಂದಂತೆ ಹಲ್ಲೆ ನಡೆಸಿ ಆತನ ಕತ್ತನ್ನು ಬಿಗಿಯಾಗಿ ಹಿಡಿದು ಹಿಂಸಿಸಿದ್ದ ದೃಶ್ಯ ಸಿಸಿಟಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆ ಬಳಿಕ ಕೆಲ ಸಮಯದಲ್ಲೇ ಬೈಕ್ ಸವಾರನ ವಿರುದ್ಧ ಸುಳ್ಳುಕಥೆ ಕಟ್ಟಿ ಆರೋಪ ಮಾಡಿದ್ದ. ಕನ್ನಡಿಗನ ಮೇಲೆ ಹಲ್ಲೆ ನಡೆಸಿದ ವಿಂಗ್ ಕಮಾಂಡರ್ ನನ್ನು ಬಂಧಿಸುವಂತೆ ಆಗ್ರಹಗಳು ಕೇಳಿಬಂದಿವೆ.

Related Articles

Back to top button