Kannada NewsKarnataka NewsLatest

*ಚಿನ್ನಾಭರಣಗಳೊಂದಿಗೆ ಪ್ರಿಯಕರನೊಂದಿಗೆ ಎಸ್ಕೇಪ್ ಆದ ಪತ್ನಿ; ಇಬ್ಬರು ಮಕ್ಕಳನ್ನು ಕೊಲೆಗೈದು ಆತ್ಮಹತ್ಯೆಗೆ ಶರಣಾದ ಪತಿ*

ಪ್ರಗತಿವಾಹಿನಿ ಸುದ್ದಿ: ಪತ್ನಿ ಮನೆಯಲ್ಲಿದ್ದ ಚಿನ್ನಾಭರಣಗಳೊಂದಿಗೆ ಪ್ರಿಯಕರನ ಜೊತೆ ಪರಾರಿಯಾಗಿದ್ದು, ಇದರಿಂದ ಬೇಸತ್ತ ಪತಿ ತನ್ನ ಇಬ್ಬರು ಮಕ್ಕಳನ್ನು ಕೊಲೆಗೈದು ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಅಲ್ಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅರ್ಚಕ ಶಿವಣ್ಣ ಇಬ್ಬರು ಮಕ್ಕಳನ್ನು ಕೊಲೆಗೈದು ಆತ್ಮಹತ್ಯೆಗೆ ಶರಣಾದವನು. 10 ಹಾಗೂ 5 ವರ್ಷದ ಇಬ್ಬರು ಮಕ್ಕಳನ್ನು ಹತ್ಯೆಗೈದು, ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Home add -Advt

ಈ ಹಿಂದೆ ಪತ್ನಿ ಓಡಿಹೋಗಿದ್ದಾಗ ಶಿವಣ್ಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ಇದಾದ ಬಳಿಕ ಆಕೆ ಮನೆಗೆ ವಾಪಾಸ್ ಆಗಿದ್ದಳು. ಆದರೆ ಮರುದಿನ ಶಿವಣ್ಣ ಕೆಲಸಕ್ಕೆ ಹೋದಾಗ ಚಿನ್ನಾಭರಣ ಸಮೇತ ಓಡಿಹೋಗಿದ್ದಾಳೆ. ಇದರಿಂದ ನೊಂದ ಶಿವಣ್ಣ, ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Related Articles

Back to top button