Kannada NewsKarnataka NewsNational

*ಪತ್ರಕರ್ತರು ಸಾಗುತ್ತಿದ್ದ ಕಾರಿನ ಕೆಳಗೆ ಬಾಂಬ್ ಸ್ಪೋಟ*

ಪ್ರಗತಿವಾಹಿನಿ ಸುದ್ದಿ: ಪತ್ರಕರ್ತರು ಸಾಗುತ್ತಿದ್ದ ಕಾರಿನ ಕೆಳಗೆ ನಾಡಬಾಂಬ್ ಸ್ಪೋಟಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಗುಂದ ಗ್ರಾಮದ ಬಳಿ ನಡೆದಿದೆ.

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ಸಂದೇಶ್ ದೇಸಾಯಿ ಎನ್ನುವ ಪತ್ರಕರ್ತನಿಗೆ ಸೇರಿದ ಕಾರು ಸ್ಫೋಟಗೊಂಡಿದೆ. ಪತ್ರಕರ್ತರು ಶಾಸಕ ಆರ್ ವಿ ದೇಶಪಾಂಡೆ ಸಭೆಗೆ ತೆರಳುತ್ತಿದ್ದರು. ಈ ವೇಳೆ ಕಾರಿನ ಟೈರ್‌ಗೆ ಸಿಕ್ಕು ಬಾಂಬ್ ಸ್ಫೋಟಗೊಂಡಿದೆ

Home add -Advt

ಘಟನೆ ವೇಳೆ ಅದೃಷ್ಟವಶಾತ್ ಪತ್ರಕರ್ತರು ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು, ಜೋಯಿಡಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಕಾಡು ಪ್ರಾಣಿ ಬೇಟೆಗೆ ಉಪಯೋಗಿಸುವ ನಾಡಬಾಂಬ್‌ ಸ್ಪೋಟಗೊಂಡಿದೆ ಎನ್ನಲಾಗಿದೆ.

https://pragativahini.com/counterfeit-note-racket-busted-in-begavi-five-arrested

Related Articles

Back to top button