Kannada NewsKarnataka NewsLatest

*ಲೋಕಾಯುಕ್ತರ ಹೆಸರಲ್ಲಿ ಬೆದರಿಕೆ; ನಕಲಿ ಲೋಕಾಯುಕ್ತ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಲೋಕಾಯುಕ್ತರ ಹೆಸರಲ್ಲಿ ಕರೆ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದ ನಕಲಿ ಲೋಕಾಯುಕ್ತನನ್ನು ಪೊಲೀಸರು ಬಂಧಿಸಿದ್ದಾರೆ.

ತ್ಯಾಗರಾಜ್ ಬಂಧಿತ ಆರೋಪಿ. ಈತ ತಾನು ಲೋಕಾಯುಕ್ತ ಎಡಿಜಿಪಿ ಎಂದು ಹೇಳಿಕೊಂಡು ಶಿರಾ ವಿಭಾಗದ ಭದ್ರಾ ಮೇಲ್ದಂಡೆ ಕಾರ್ಯಪಾಲಕ ಇಂಜಿನಿಯರ್ ರಾಮದಾಸಪ್ಪ ಅವರಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದ.

Home add -Advt

ರಾಮದಾಸಪ್ಪ ಅವರಿಗೆ ಕರೆ ಮಾಡಿದ್ದ ಆರೋಪಿ ತ್ಯಾಗರಾಜ್, ಮೊದಲು ತಾನು ಲೋಕಾಯುಕ್ತ ಇನ್ಸ್ ಪೆಕ್ಟರ್ ಎಂದು ಹೇಳಿದ್ದಾನೆ. ನಮ್ಮ ಲೋಕಾಯುಕ್ತ ಡಿವೈ ಎಸ್ ಪಿ ನಿಮ್ಮ ಬಳಿ ಮಾತನಾಡುತ್ತಾರೆ ಎಂದಿದ್ದಾನೆ. ಬಳಿಕ ಧ್ವನಿ ಬದಲಿಸಿಕೊಂಡು ನಾನು ಲೋಕಾಯುಕ ಡಿವೈ ಎಸ್ ಪಿ, ನಿಮ್ಮ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಮುಚ್ಚಿಹಾಕಲು ವ್ಯವಹಾರ ಮಾಡಬೇಕು ನಮ್ಮ ಇನ್ಸ್ ಪೆಕ್ಟರ್ ನ್ನು ಭೇಟಿಯಾಗಿ ಎಂದಿದ್ದಾನೆ.

ಈ ಬಗ್ಗೆ ಅನುಮಾನಗೊಂಡ ರಾಮದಾಸಪ್ಪ ವಿಧಾನಸೌಧ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು ನಕಲಿ ಲೋಕಾಯುಕ್ತ ತ್ಯಾಗರಾಜ್ ನನ್ನು ಬಂಧಿಸಿದ್ದಾರೆ.


Related Articles

Back to top button