Belagavi NewsBelgaum NewsKannada NewsKarnataka News
*ಕಾಲು ಜಾರಿ ನದಿಯಲ್ಲಿ ಬಿದ್ದು ಯುವಕ ಸಾವು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆಗೆ ನದಿಗಳು ಉಕ್ಕಿ ಹರಿಯುತ್ತಿದೆ. ಕೃಷ್ಣ ನದಿಯಲ್ಲಿ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ಬಳಿ ಯುವಕನೋರ್ವ ನೈವೇದ್ಯ ಬಿಡಲು ಹೊದಾಗ ಕಾಲು ಜಾರಿ ನದಿಯಲ್ಲಿ ಬಿದ್ದು ಯುವಕ ದಾರುಣ ಸಾವನ್ನಪ್ಪಿದ್ದಾನೆ.
ರೋಹಣ ಪಾಟೀಲ(31) ಮೃತಪಟ್ಟ ಯುವಕ. ನದಿಗೆ ಸ್ನೇಹಿತನ ಜೊತೆಗೆ ನೈವೇದ್ಯ ಬಿಡಲು ಹೋದಾಗ ನದಿಯ ಸುಳಿಯಲ್ಲಿ ಸಿಲುಕಿ ಯುವಕ ಸಾವನ್ನಪ್ಪಿದ್ದಾನೆ. ಸೋಮವಾರ ಸಾಯಂಕಾಲ 5 ಗಂಟೆಗೆ ಸುಮಾರಿಗೆ ಶವವನ್ನು ಹೋರತಗೆಯಲಾಯಿತು. ರೋಹಣ್ ಪಾಟೀಲ್ ಸಾವನ್ನುಪ್ಪಿದ ಘಟನೆ ತಿಳಿದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಂಕಲಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.




