Belagavi NewsBelgaum NewsLatest
ಬೆಟಗೇರಿ ಗ್ರಾಮದಲ್ಲಿ ಸುರಿದ ಮಳೆಗೆ ಮನೆ ಗೋಡೆ ಕುಸಿದು ದ್ವಿಚಕ್ರ ವಾಹನಗಳಿಗೆ ಹಾನಿ

ಪ್ರಗತಿವಾಹಿನಿ ಸುದ್ದಿ, ಬೆಟಗೇರಿ : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಕಳೆದ ಸುಮಾರು ನಾಲ್ಕೈದು ದಿನಗಳಿಂದ ಹಗಲು-ರಾತ್ರಿ ಆಗಾಗ ಮಳೆ ಜೋರಾಗಿ ಸುರಿಯುತ್ತಿದ್ದು, ಗುರುವಾರ ರಾತ್ರಿ ಸುರಿದ ಮಳೆಗೆ ಎರಡು-ಮೂರು ದ್ವಿಚಕ್ರ ವಾಹನಗಳ ಮೇಲೆ ಮನೆಯ ಗೋಡೆ ಕುಸಿದಿದೆ.
ಮನೆ ಗೋಡೆಯ ಕಲ್ಲು ಮಣ್ಣು ದ್ವಿಚಕ್ರ ವಾಹನಗಳ ಮೇಲೆ ಬಿದ್ದು ದ್ವಿಚಕ್ರ ವಾಹನಗಳು ಹಾನಿಗೀಡಾಗಿವೆ. ಹೀಗಾಗಿ ಗ್ರಾಮದ ರಸ್ತೆ ಮೇಲೆ ಮೇಲೆ ಮಕ್ಕಳು, ಸ್ಥಳೀಯರು ಜೀವ ಭಯದಲ್ಲಿ ಓಡಾಡುವಂತಾಗಿದೆ.
ಸುಮಾರು ನಾಲ್ಕೈದು ದಿನದಿಂದ ಹಗಲು ಇಲ್ಲವೇ ರಾತ್ರಿ ಹೊತ್ತು ಆಗಾಗ ಮಳೆ ಸುರಿದು ಬೆಟಗೇರಿ ಗ್ರಾಮದ ಹಾಗೂ ಸುತ್ತಲಿನ ಹಳ್ಳಿಗಳಲ್ಲಿರುವ ಬಹುತೇಕ ಹೊಲ-ಗದ್ದೆಗಳಲ್ಲಿರುವ ಗೋವಿನಜೋಳ ಸೇರಿದಂತೆ ಭೂಮಿಯಲ್ಲಿದ್ದ ಬೆಳೆಗಳು ನೆಲಕಚ್ಚಿ ಈಗಾಗಲೇ ನಾಶವಾಗಿ ಹೋಗುತ್ತಿವೆ. ಹೀಗೆ ಕೆಲವು ದಿನ ಮಳೆ ಮುಂದುವರಿದರೆ ಅಳಿದುಳಿದ ಇನ್ನೂ ಕೆಲವು ಬೆಳೆಗಳು ಸಂಪೂರ್ಣ ಹಾಳಾಗುವ ಆತಂಕ ಸ್ಥಳೀಯ ರೈತರಲ್ಲಿ ಮೂಡಿದೆ.