Kannada NewsKarnataka NewsLatest

*ಜಿಲ್ಲಾ ಘಟಕಗಳಿಗೆ ಬಿಜೆಪಿ ಅಧ್ಯಕ್ಷರ ನೇಮಕ; ಬೆಳಗಾವಿ ನಗರ ಘಟಕಕ್ಕೆ ಮಹಿಳೆಗೆ ಪ್ರಾತಿನಿದ್ಯ*

ಪ್ರಗತಿವಾಹಿನಿ ಸುದ್ದಿ: 39 ಸಂಘಟನಾತ್ಮಕ ಜಿಲ್ಲೆಗಳಿಗೆ ಬಿಜೆಪಿ ಜಿಲ್ಲಾಧ್ಯಕ್ಷರ ನೇಮಕ ಮಾಡಲಾಗಿದೆ. ಈ ಪೈಕಿ 9 ಜಿಲ್ಲೆಗಳಲ್ಲಿ ಹಾಲಿ ಅಧ್ಯಕ್ಷಕರನ್ನೇ ಮುಂದುವರೆಸಲಾಗಿದೆ.

ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಜಿಲ್ಲಾಧ್ಯಕ್ಷರ ನೇಮಕ ಮಾಡಿ ಪ್ರಕಟಣೆ ಹೊರಡಿಸಿದ್ದಾರೆ. ಹಲವು ಜಿಲ್ಲೆಗಳಲ್ಲಿ ಹೊಸ ಮುಖಗಳಿಗೆ ಅವಕಾಶ ಕಲ್ಪಿಸಲಾಗಿದೆ. ಈ ಮೂಲಕ ವಿಜಯೇಂದ್ರ, ತಮ್ಮ ಬೆಂಬಲಿಗರಿಗಷ್ಟೇ ಹುದ್ದೆ ಸಿಗುತ್ತದೆ ಎಂಬ ಅನುಮಾನವನ್ನು ಹುಸಿಗೊಳಿಸಿದ್ದು, ನಿಷ್ಠಾವಂತರಿಗೆ ಜವಾಬ್ದಾರಿ ವಹಿಸಿದ್ದಾರೆ.

Home add -Advt

ಹಾಲಿ ಶಾಸಕರಾಗಿರುವ ರಾಯಚೂರು ಜಿಲ್ಲಾಧ್ಯಕ್ಷ ಸಿ.ಕೆ.ರಮ ಮೂರ್ತಿ ಅವರಿಗೆ ಬೆಂಗಳೂರು ದಕ್ಷಿಣ, ಮಾಜಿ ಶಾಸಕರಾದ ಎಲ್.ನಾಗೇಂದ್ರ ಅವರಿಗೆ ಮೈಸೂರು ನಗರ ಜಿಲ್ಲಾಧ್ಯಕ್ಷ, ಸಿ.ಎಸ್.ನಿರಂಜನ್ ಕುಮಾರ್ ಅವರಿಗೆ ಚಾಮರಾಜನಗರ, ಅರುಣ್ ಕುಮಾರ್ ಪೂಜಾರ್ ಅವರಿಗೆ ಹಾವೇರಿ ಜಿಲ್ಲಾಧ್ಯಕ್ಷ ಸ್ಥಾನ ಸೇರಿದಂತೆ ಒಟ್ಟು 39 ಜಿಲ್ಲಾಧ್ಯಕ್ಷರ ಪೈಕಿಕೇವಲ ಒಬ್ಬರು ಮಹಿಳೆಯರಿಗೆ ಸ್ಥಾನ ನೀಡಲಾಗಿದೆ.

ಬೆಳಗಾವಿ ನಗರ ಘಾಕದ ಅಧ್ಯಕ್ಷರನ್ನಾಗಿ ಗೀತಾ ಸುತಾರ್ ಅವರನ್ನು ನೇಮಕ ಮಾಡಲಾಗಿದೆ. ಇನ್ನು ಬೆಂಗಳೂರು ಉತ್ತರ ಬಿಜೆಪಿ ಘಟದ ಅಧ್ಯಕ್ಷ ಸ್ಥಾನ ವಿಜಯೇಂದ್ರ ಆಪ್ತ ತಮ್ಮೇಶ್ ಕೈ ತಪ್ಪಿದ್ದು, ಮಾಜಿ ಉಪಮೇಯರ್ ಎಸ್.ಹರೀಶ್ ಅವರನ್ನು ನೇಮಕ ಮಾಡಲಾಗಿದೆ.


Related Articles

Back to top button