Kannada NewsKarnataka NewsLatest

*ಖಾಸಗಿ ಶಾಲೆ ಬಸ್ ಹರಿದು ಇಬ್ಬರು ಮಕ್ಕಳು ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಖಾಸಗಿ ಶಾಲೆ ಬಸ್ ಡಿಕ್ಕಿಯಾಗಿ ಕೆಳಗೆ ಬಿದ್ದ ಮಕ್ಕಳ ಮೇಲೆಯೇ ಹರಿದು ಹೋಗಿದ್ದು, ಸ್ಥಳದಲ್ಲೇ ಇಬ್ಬರು ಮಕ್ಕಳು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.

Home add -Advt

ಬೆಂಗಳೂರಿನ ಹೆಣ್ಣೂರು ವ್ಯಾಪ್ತಿಯ ಥಣಿಸಂದ್ರ ಬಳಿ ಈ ದುರಂತ ಸಂಭವಿಸುದೆ. 2 ವರ್ಷದ ವರ್ಷಾ ಹಾಗೂ 4 ವರ್ಷದ ಭಾನು ಮೃತ ಮಕ್ಕಳು. ಸ್ಕೂಲ್ ಬಸ್ ರಸ್ತೆ ತಿರುವಿನಲ್ಲಿ ಟರ್ನ್ ಮಾಡುವಾಗ ಬೈಕ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಮಕ್ಕಳು ಕೆಳಗೆ ಬಿದ್ದಿದ್ದಾರೆ. ಕೆಳಗ ಬಿದ್ದ ಮಕ್ಕಳ ಮೇಲೆಯೇ ಬಸ್ ಹರಿದು ಹೋಗಿದೆ.

ಬಸ್ ಚಕ್ರಕ್ಕೆ ಸಿಲುಕಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಸಿಎಆರ್ ಕಾನ್ಸ್ ಟೇಬಲ್ ನಾಗನಗೌಡಗೂ ಅಪಘಾತದಲ್ಲಿ ಗಾಯಗಳಾಗಿವೆ. ಮೃತ ಮಗು ವರ್ಷಾ ಕಾನ್ಸ್ ಟೇಬಲ್ ನಾಗನಗೌಡ ಅವರ ಮಗಳು. ಮಗು ಭಾನು ನಾಗನಗೌಡ ಸಹೋದರನ ಮಗಳು. ಶಾಲಾ ಬಸ್ ಚಾಲಕನ ಅಜಾಗರೂಕತೆಗೆ ಇಬ್ಬರು ಮಕ್ಕಳು ಬಲಿಯಾಗಿದ್ದಾರೆ.

ಅಪಘಾತದ ಭೀಕರ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ. ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button