Kannada NewsKarnataka NewsLatest
ನಾಯಕರು ಸಮರ್ಥರಿದ್ದಾರೆ, ಸಮರ್ಥವಾಗಿ ಎದುರಿಸುತ್ತಾರೆ – ಲಕ್ಷ್ಮಿ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಚುನಾವಣೆ ಸಂದರ್ಭದಲ್ಲಿ ಪ್ರತಿ ಬಾರಿ ರಾಜಕೀಯ ದುರುದ್ದೇಶದಿಂದ ದಾಳಿ ನಡೆಯುತ್ತಿದೆ. ನಮ್ಮ ನಾಯಕರು ಸಮರ್ಥರಿದ್ದಾರೆ, ಸಮರ್ಥವಾಗಿ ಎಲ್ಲವನ್ನೂ ಎದುರಿಸುತ್ತಾರೆ ಎಂದು ಕೆಪಿಸಿಸಿ ವಕ್ತಾರರೂ, ಶಾಸಕರೂ ಆಗಿರುವ ಲಕ್ಷ್ಮಿ ಹೆಬ್ಬಾಳಕರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮನೆಮೇಲೆ ಸಿಬಿಐ ದಾಳಿ ನಡೆಸಿರುವ ಕುರಿತು ಪ್ರತಿಕ್ರಿಯಿಸಿರುವ ಅವರು, ಹಿಂದೆ ಇಡಿ ಆಯ್ತು, ಐಟಿ ಆಯ್ತು, ಈಗ ಸಿಬಿಐ ದಾಳಿಯಾಗಿದೆ. ಉಪಚುನಾವಣೆಗೆ ನಾವೆಲ್ಲ ಸಿದ್ಧರಾಗುತ್ತಿದ್ದೇವೆ. ಅದಕ್ಕೆ ಅಡಚಣೆ ಉಂಟು ಮಾಡಲೆಂದೇ ಈ ದಾಳಿ ನಡೆದಿದೆ ಎಂದು ಹೇಳಿದರು.
ಯಾವ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ ಎನ್ನುವ ಮಾಹಿತಿ ನನಗಿಲ್ಲ. ಆದರೆ ಎಲ್ಲವನ್ನೂ ಕಾನೂನು ಪ್ರಕಾರ ಎದುರಿಸಲು ನಮ್ಮ ನಾಯಕರು ಸಮರ್ಥರು ಎಂದು ಹೆಬ್ಬಾಳಕರ್ ಹೇಳಿದರು.



